ಮಂಗಳೂರು : ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರದಲ್ಲಿ ಅನಾಮಿಕ ವ್ಯಕ್ತಿಯೊಬ್ಬನನ್ನು ಚುಬ್ಬಿಟ್ಟಿರುವುದು, 16 ಗುಂಡಿಗಳನ್ನು ತೆಗೆದರೂ ಯಾವುದೇ ಪತ್ತೆಯಾಗದ ಘಟನೆ. ಇದು ಕೇವಲ ಧರ್ಮಸ್ಥಳಕ್ಕೆ ಮಾತ್ರ ಸೀಮಿತವಲ್ಲ. ಇಂತಹ ನಕಲಿ ಷಡ್ಯಂತ್ರಗಳು ನಾಳೆ ಉಡುಪಿ, ಶೃಂಗೇರಿ, ನಂಜನಗೂಡು ಅಥವಾ ಇತರೆ ಪವಿತ್ರ ಕ್ಷೇತ್ರಗಳಿಗೆ ವ್ಯಾಪಿಸಬಹುದಾದ ಅಪಾಯವಿದೆ.

ಇದರಿಂದಾಗಿ, ನಮ್ಮೆಲ್ಲರಿಗೂ ಎಚ್ಚರಿಕೆಯಿಂದ ಯೋಚನೆ ಮಾಡಬೇಕಾಗಿದೆ. ಧರ್ಮಸ್ಥಳದಂತಹ ದೇವಾಲಯಗಳಲ್ಲಿ ಈ ರೀತಿಯ ಕೃತ್ಯಗಳು ಪವಿತ್ರತೆಯ ಮೇಲೆ ಧಕ್ಕೆಯಾಗುತ್ತವೆ. ಈ ನಕಲಿ ಷಡ್ಯಂತ್ರವನ್ನು ಬಯಲಿಗೆ ಎಳೆದು, ಅದರ ಹಿಂದಿರುವವರ ಎಡೆಮುರಿಯನ್ನೇ ಕಟ್ಟಿ, ಕಾನೂನಿನ ಕಟ್ಟೆಕಟ್ಟೆಯ ಬಳಿ ಕರೆದು ಬಂದಿಮಾಡುವವರೆಗೆ ನಮ್ಮ ಹೋರಾಟ ನಿಲ್ಲಬಾರದು.

ನಾವು ಎಲ್ಲರೂ ಧರ್ಮ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆಯ ದೃಷ್ಟಿಯಿಂದ ಒಂದಾಗಿ ನಿಲ್ಲಬೇಕು,” ಎಂದು ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಗಂಭೀರ ಎಚ್ಚರಿಕೆ ನೀಡಿದ್ದಾರೆ.