ಮಂಗಳೂರು: ‘ರಸ್ತೆಯಲ್ಲಿ ನಮಾಜ್ ಮುಂದುವರೆದರೆ ಜಿಲ್ಲೆಯ ಮಸೀದಿಗಳ ಎದುರು ಭಜರಂಗದಳ ಹನುಮಾನ್ ಚಾಲೀಸಾ ಪಠಿಸಿಯೇ ಪಠಿಸುತ್ತೇವೆʼ ಎಂದು ವಿಎಚ್ ಪಿ ಪ್ರತಿಭಟನೆಯಲ್ಲಿ ಭಜರಂಗದಳ ವಿಭಾಗ ಸಂಯೋಜಕ್ ಪುನೀತ್ ಅತ್ತಾವರ ಎಚ್ಚರಿಕೆ ನೀಡಿದ್ದಾರೆ.
ಉಳ್ಳಾಲ ಮುಡಿಪು ಬಳಿ ರಸ್ತೆ ಬಂದ್ ಮಾಡಿ ಇಫ್ತಾರ್ ನಡೆಸಿದರು.ಆ ಮೂಲಕ ಈ ಜಿಹಾದ್ ಮುಸ್ಲಿಮರಿಗೆ ಧೈರ್ಯ ಬಂತು. ಹೀಗಾಗಿಯೇ ಕಂಕನಾಡಿಯಲ್ಲಿ ರಸ್ತೆ ಬದಿ ನಮಾಜ್ ಮಾಡಿದ್ದಾರೆ. ಆ ರಸ್ತೆಯ ಕೆಲ ಫ್ಲಾಟ್ ಗಳಲ್ಲಿ ಇಂಥವರೇ ತುಂಬಿದ್ದಾರೆ. ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಅರೆಸ್ಟ್ ಆಗಿದ್ದು ಕೂಡ ಇಲ್ಲಿಯೇ.
ಎನ್ಐಎ ತಂಡ ಕೂಡ ಅಲ್ಲಿ ದಾಳಿ ನಡೆಸಿ ನಿಷೇಧಿತ ಸಂಘಟನೆಯ ಒಬ್ಬ ನಾಯಕನ ಬಂಧಿಸಿತ್ತು. ಆ ಮಸೀದಿ ಪಕ್ಕದ ಕೆಲ ಜಾಗಗಳಲ್ಲಿ ಇಂಥ ದೇಶ ವಿರೋಧಿಗಳೇ ಇದ್ದಾರೆ. ಶರಣ್ ಪಂಪ್ ವೆಲ್ ಹೇಳಿದ್ದು ನಮಾಜ್ ಮಾಡಿದರೆ ಸಾಂಕೇತಿಕ ಹನುಮಾನ್ ಚಾಲೀಸ್ ಪಠಣ ಅಂತ. ಆದರೆ ನಾವು ಮತ್ತೆ ಹೇಳ್ತೇವೆ, ಮತ್ತೆ ನಮಾಜ್ ನಡೆದ್ರೆ ಹನುಮಾನ್ ಚಾಲೀಸ ಪಠಣ ಮಾಡೇ ಮಾಡ್ತೀವಿ.
ಆದರೆ ಇನ್ನು ಮುಂದೆ ನಮ್ಮ ಕೈಯ್ಯಲ್ಲಿ ಧ್ವಜ ಇರಲ್ಲ, ಬದಲಾಗಿ ದಂಡ ಇರುತ್ತೆ. ಬಾವುಟ ಗುಡ್ಡೆ ಮಸೀದಿ ಸೇರಿ ಹಲವೆಡೆ ರಸ್ತೆಯಲ್ಲಿ ನಮಾಜ್ ಮಾಡ್ತಾರೆ. ಆದರೆ ಇನ್ನು ಮುಂದೆ ಇಂಥ ನಮಾಜ್ ಗಳು ನಿಲ್ಲಬೇಕು. ನಿಲ್ಲದೇ ಇದ್ದರೆ ಭಜರಂಗದಳ ಎಲ್ಲಾ ಮಸೀದಿಗಳ ಎದುರು ಹನುಮಾನ್ ಚಾಲೀಸ್ ಪಠಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

