ಮಂಗಳೂರು: ಸರ್ಕಾರದ ಕ್ರಮದ ಬಗ್ಗೆ ನಾನು ಟೀಕೆ ಟಿಪ್ಪಣಿ ಮಾಡಲ್ಲ. ಆಗಬಾರದ್ದು ಆಗಿದೆ, ಸರ್ಕಾರದ್ದು ಕ್ಯಾಬಿನೆಟ್ ನಿರ್ಧಾರ. ಜವಾಬ್ದಾರಿ ಸ್ಥಾನದಲ್ಲಿ ಇರೋರು ಮಾಡಿದ ಕಾರ್ಯಕ್ರಮ ಅದು. ಅದರ ಬಗ್ಗೆ ಸಚಿವ ಸಂಪುಟ ನಿರ್ಧಾರದ ಮೇಲೆ ನಾನು ಏನೂ ಹೇಳಲು ಆಗಲ್ಲ ಎಂದು ಮಂಗಳೂರಿನಲ್ಲಿ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದರು.
ಕರ್ನಾಟಕ ರಾಜ್ಯದಲ್ಲಿ ಕಾಲ್ತುಳಿತ ಇತಿಹಾಸದಲ್ಲಿ ಮೊದಲ ಬಾರಿ. ದಯಾನಂದ್ ಒಬ್ಬ ಬಹಳ ಪ್ರಮಾಣಿಕ ಮತ್ತು ಸ್ವಚ್ಛ ಕಮಿಷನರ್, ಅವರು ಇಲಾಖೆಯಲ್ಲಿ ಬಹಳಷ್ಟು ಬದಲಾವಣೆ ತಂದಿದ್ದಾರೆ. ಆದರೆ ಕ್ಯಾಬಿನೆಟ್ ನಿರ್ಧಾರವಾದ ಕಾರಣ ನಾನು ಮಾತನಾಡಲ್ಲ. ಮಂಗಳೂರಿನಲ್ಲಿ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಇವತ್ತು ಜಿಲ್ಲೆಯ ಸಮಾನ ಮನಸ್ಕರ ಜೊತೆ ಮಾತನಾಡಿದ್ದೇನೆ. ನಾವೆಲ್ಲರೂ ಸೇರಿ ಜಿಲ್ಲೆಯಲ್ಲಿ ಸೌಹಾರ್ದತೆ ನಿರ್ಮಾಣದ ಪ್ರಯತ್ನ ಮಾಡ್ತೇವೆ. ದ.ಕ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಒಟ್ಟಾಗಿ ಪ್ರಯತ್ನ ಮಾಡ್ತೇವೆ. ವೈದ್ಯರು, ಬರಹಗಾರರು, ಚಿಂತಕರ ಜೊತೆ ಮಾತನಾಡಿದ್ದೇನೆ. ಮುಂದಿನ ಹೆಜ್ಜೆಗಳು ಏನು ಎಂಬ ಬಗ್ಗೆ ಬಹಳ ಚರ್ಚೆ ಆಗಿದೆ. ಇದು ಸುಮಾರು ವರ್ಷಗಳಿಂದ ಕೋಮು ದ್ರುವಿಕರಣದಿಂದ ಘಟನೆಗಳು ಆಗ್ತಿದೆ ಎಂದರು.
ವೈಯಕ್ತಿಕ ದ್ವೇಷದಿಂದ ಅಗಿದೆ ಅನ್ನೋದನ್ನ ನಾನು ಒಪ್ಪಲ್ಲ. ಕೆಪಿಸಿಸಿ ನಿಯೋಗ ಅವರದ್ದೇ ಮಾಹಿತಿ ಪಡೆದು ಹೇಳಿಕೆ ಕೊಟ್ಟಿರಬಹುದು. ಅದಕ್ಕೂ ನನಗೂ ಸಂಬಂಧ ಇಲ್ಲ, ನನ್ನ ಮಾಹಿತಿ ಮುಖ್ಯಮಂತ್ರಿಗಳಿಗೆ ಕೊಡ್ತೇನೆ. ಕಾನೂನು ಎಲ್ಲರಿಗೂ ಸಮಾನ, ಅದರಲ್ಲಿ ಧರ್ಮ ಜಾತಿ ಅಂತ ಯಾವುದೂ ಬರಲ್ಲ. ಹಾಗಾಗಿ ಗಡೀಪಾರು ವಿಚಾರದಲ್ಲೂ ಯಾವುದೇ ಜಾತಿ ಧರ್ಮ ಬರಲ್ಲ. ನಾನು ಪರಿಷತ್ ಸದಸ್ಯನಾಗಿ ಸಿಎಂ ಜೊತೆ ಮಾತನಾಡಿ ಇಲ್ಲಿಗೆ ಬಂದಿದ್ದೇನೆ ಎಂದರು.
ನ್ಯಾಯಾಲಯದ ಸಹಕಾರ ಇರಲಿಲ್ಲ ಎಂದರೆ ಕರಾವಳಿಯಲ್ಲಿ ಶಾಂತಿ ಸ್ಥಾಪನೆ ಕಷ್ಟ. ಯಾವುದೇ ಧರ್ಮ ಜಾತಿಯವರಾದ್ರೂ ದ್ವೇಷ ಭಾಷಣ ಸಲ್ಲದು. ಸುಪ್ರೀಂ ಕೋರ್ಟ್ ಕೂಡ ದ್ವೇಷ ಭಾಷಣ ಮಾಡೋರ ಮೇಲೆ ಸ್ವಯಂ ಪ್ರೇರಿತ ಎಫ್ಐಆರ್ ದಾಖಲಿಸಲು ಹೇಳಿದೆ. ಕಾರ್ಯಾಂಗ ಮತ್ತು ನ್ಯಾಯಾಂಗ ಸಹಕಾರ ಇರಲಿಲ್ಲ ಅಂದರೆ ರಾಜ್ಯದಲ್ಲಿ ಶಾಂತಿ ನೆಲೆಸೋದು ಕಷ್ಟ. ಇಂಥಹ ಕೇಸ್ ನಲ್ಲಿ ಸರಿಯಾಗಿ ನ್ಯಾಯಾಲಯಕ್ಕೆ ಪ್ರೆಸೆಂಟ್ ಮಾಡಬೇಕು. ಕೆಲವು ಸಂಧರ್ಬದಲ್ಲಿ ಯಾವುದೋ ಒತ್ತಡಕ್ಕೆ ಬಿದ್ದು ಆಗುತ್ತೆ. ಅದು ಆಗಬಾರದು ಅಂತ ನಾನು ಮುಖ್ಯಮಂತ್ರಿಗಳ ಗಮನಕ್ಕೆ ತರ್ತೇನೆ. ದ್ವೇಷ ಭಾಷಣ ಮಾಡೋರಿಗೆ ರಿಲೀಫ್ ಸಿಕ್ಕಿದ್ರೆ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ದ್ರೋಹ ಬಗೆದಂತಾಗುತ್ತದೆ ಎಂದರು.

