ಮಂಗಳೂರು : ಮಿಲಾಗ್ರೀಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಕ್ರೈಸ್ತ ಧರ್ಮಗುರುವಿಗೆ ಮೂವರು ವಿದ್ಯಾರ್ಥಿಗಳು ಹಲ್ಲೆ ಮಾಡಿದಾಗ ಅವರ ಪರವಾಗಿ 800 ಮಂದಿ ನಡೆಸಿದ್ದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ನಾನು ಭಾಷಣ ಮಾಡಿದ್ದೆ. ಯಾರು ತಪ್ಪು ಮಾಡಿದರೂ ಅದನ್ನು ನಾವು ಧೈರ್ಯವಾಗಿ ಹೇಳ್ತೇವೆ.
ಯಾವ ಕಾಲೇಜಿನಲ್ಲಿ ಪರೀಕ್ಷೆ ಇದೆ, ಇಲ್ಲ ಎನ್ನುವುದನ್ನು ನೋಡಿಕೊಳ್ಳುವ ಜವಾಬ್ದಾರಿ ವೇದವ್ಯಾಸ ಕಾಮತ್ ನದ್ದಲ್ಲ. ಅದನ್ನು ಸರ್ಕಾರ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಕೂರಿಸಿದ್ದು ನಾವಲ್ಲ. ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕು ಎಂದು ಕಾಮತ್ ಪ್ರತಿಪಾದಿಸಿದರು.
ಪರೀಕ್ಷೆ ಮುಂದೂಡುವ ವಿಚಾರ ಕಾಲೇಜು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ನಡುವಿನ ವಿಚಾರ ಆಗಿದ್ದರಿಂದ ನಾವು ಮಧ್ಯೆ ಹೋಗಿಲ್ಲ. ಆದರೆ ಪ್ರತಿಭಟನೆ ಮಾಡುತ್ತಿದ್ದ ಮಹಿಳಾ ಪೊಲೀಸರಿಲ್ಲದೆ ವಿದ್ಯಾರ್ಥಿನಿಯರನ್ನು ದೂಡಿದ್ದಾಗಿ ಉಸ್ತುವಾರಿ ಸಚಿವರು, ವಿಧಾನಪರಿಷತ್ ಸದಸ್ಯ, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ಮಹಿಳಾ ಪೊಲೀಸರಿಲ್ಲದೆ ವಿದ್ಯಾರ್ಥಿನಿಯರನ್ನು ದೂಡುತ್ತಿದ್ದು ತಡೆಯಿರಿ ಎಂದ ಬಳಿಕವೂ ಹೊಡೆದಿದ್ದಾರೆಂದರೆ ಸಚಿವರು, ಸರ್ಕಾರದ ಕೃಪಕಟಾಕ್ಷ ಇಲ್ಲದೆ ಸಾಧ್ಯವೇ ಎಂದು ಕಾಮತ್ ಪ್ರಶ್ನಿಸಿದ್ದಾರೆ.

