ಮಂಗಳೂರು: ದಕ್ಷಿಣ ಕನ್ನಡ ಕೆಡಿಪಿ ಸಭೆಯಲ್ಲಿ ಹೈ ಡ್ರಾಮಾ ನಡೆದಿದ್ದು, ಉಸ್ತುವಾರಿ ಸಚಿವ ಯು ಟಿ ಖಾದರ್ ವಿರುದ್ಧ ಬಿಜೆಪಿ ಶಾಸಕರು ಮುಗಿ ಬಿದ್ದರು.
ಬಿಜೆಪಿ ಶಾಸಕರ ವಿರುದ್ಧ ಸಚಿವ ಯು ಟಿ ಖಾದರ್ ಅಸಮಾಧಾನ ವ್ಯಕ್ತಪಡಿಸಿದರು. ಗಂಭೀರ ಸಮಸ್ಯೆಗಳಿವೆ ಅದರ ಬಗ್ಗೆ ಚರ್ಚೆ ಮಾಡೋಣ. ಮಕ್ಕಳಾಟಿಕೆ ಮಾಡಬೇಡಿ ಎಂದು ಬಿಜೆಪಿ ಶಾಸಕ ಭಾರತ್ ಶೆಟ್ಟಿ ಗೆ ತಾಕೀತು ಮಾಡಿದರು.
ಖಾದರ್ ಹೇಳಿಕೆ ವಿರುದ್ಧ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಭ್ರಷ್ಟಾಚಾರದ ಆರೋಪವನ್ನ ಮಕ್ಕಳಾಟಿಕೆ ಎಂದು ಹೇಗೆ ಹೇಳುತ್ತೀರಿ, ಸಚಿವ ಯು ಟಿ ಖಾದರ್ ವಿರುದ್ಧ ಬಿಜೆಪಿ ಶಾಸಕ ಭರತ್ ಶೆಟ್ಟಿ ವಾಗ್ದಾಳಿ ನಡೆಸಿದರು.

