ಪುತ್ತೂರು: ಸುಡುವ ಬಿಸಿಲಿನ ನಡುವೆ ಅಲ್ಲಲ್ಲಿ ಭಾರಿ ಮಳೆಯಾಗಿರುವ ಘಟನೆ ಫೆ.18ರ ಮಧ್ಯಾಹ್ನ ಪುತ್ತೂರಿನ ಗ್ರಾಮಾಂತರ ಭಾಗದಲ್ಲಿ ನಡೆದಿದೆ.
ಪುತ್ತೂರಿನ ಬೆಟ್ಟಂಪಾಡಿ, ಆರ್ಲಪದವು ಹಾಗೂ ಕಬಕದಲ್ಲಿ ಮಧ್ಯಾಹ್ನ ಸಮಯ ಸುರಿದಿದೆ. ರೆಂಜದಲ್ಲಿ ಭಾರಿ ಮಳೆಯಾಗಿದೆ. ವಿಟ್ಲದಲ್ಲೂ ಸಾಧಾರಣ ಮಳೆಯಾಗಿದೆ.
ಪುತ್ತೂರು ಕಡಬ ಸುಳ್ಯದಲ್ಲಿ ಮೋಡಮುಸುಕಿದ ವಾತಾವರಣ ಮತ್ತು ತಂಪಾದ ವಾತಾವರಣವಿದೆ. ರಾತ್ರಿ ಮಳೆಯಾಗುವ ಸಾಧ್ಯತೆಯಿದೆ.

