ಪುತ್ತೂರು : ಪುತ್ತೂರಿನ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು, ಮೂರು ಮನೆಗಳಿಗೆ ಹಾನಿಯಾಗಿದ್ದು, ಮನೆಯವರು ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಿಗೇರಿನ ಗಂಗಯ್ಯ ಗೌಡ, ಮಹಾಬಲ ಗೌಡ ಎಂಬವರಿಗೆ ಸೇರಿದ ಮನೆ ಮೇಲೆ ಭೂಕುಸಿತ ಉಂಟಾಗಿದೆ. ಕೋರಿಯ ವಿಶ್ವನಾಥ ಪೂಜಾರಿ ಎಂಬವರ ಮನೆಗೂ ಹಾನಿಯಾಗಿದೆ.

ಗಂಗಯ್ಯ ಗೌಡ ಅವರ ಹಟ್ಟಿ ಮೇಲೆ ಭೂಕುಸಿತ ಉಂಟಾಗಿ ನಾಲ್ಕು ಜಾನುವಾರು ಸಾವನ್ನಪ್ಪಿದೆ. ಮಹಾಬಲ ಗೌಡ ಅವರ ದನದ ಹಟ್ಟಿಗೂ ಧರೆ ಕುಸಿದು ಎರಡು ಜಾನುವಾರು ಮಣ್ಣಿನಡಿ ಸಿಲುಕೊಂಡಿದೆ. ಇದರ ಜೊತೆಗೆ ವಿಶ್ವನಾಥ ಪೂಜಾರಿ ಅವರ ದನದ ಹಟ್ಟಿಗೂ ಮಣ್ಣು ಬಿದ್ದು ಎರಡು ಜಾನುವಾರು ಮಣ್ಣಿನಡಿ ಸಿಲುಕಿಕೊಂಡಿದೆ ಎಂಬ ಮಾಹಿತಿ ತಿಳಿದು ಬಂದಿದೆ.

