ಮಂಗಳೂರು : ಆರೋಗ್ಯ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಟಿ ನಡೆಸಿದರು. ನೀಟ್ ಪ್ರಶ್ನಾ ಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ಆತ್ಮಹತ್ಯೆ ನಡೆದಿದೆ. ಅದನ್ನ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರ ಜೊತೆ ಸ್ಥಳೀಯರು ಕೂಡ ಸೇರಿ ಒಡೆದಿದ್ದಾರೆ. ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದ ರಾಹುಲ್ ಗಾಂಧಿಯವರ ಬಂಧನ ಖಂಡನೀಯ ಎಂದರು.

ಪ್ರತಿಭಟನೆ ಮಾಡೋರ ವಿರುದ್ದ ಕ್ರಮ ತೆಗೆದುಕೊಳ್ಳೋದು ಸಂವಿಧಾನಕ್ಕೆ ಮಾಡಿದ ಅಪಚಾರ. ವಿಶ್ವದಲ್ಲೇ ತಲೆ ತಗ್ಗಿಸೋ ಕೆಲಸ ಭಾರತ ಇವತ್ತು ಮಾಡ್ತಾ ಇದೆ. ಪಾರ್ಲಿಮೆಂಟ್ ನಲ್ಲಿ ಮಾತನಾಡೋಣ ಅಂದ್ರೆ ಮುಂದಕ್ಕೆ ಹಾಕ್ತಾರೆ. ಹೊರಗೆ ಪ್ರತಿಭಟಿಸಿದ್ರೆ ಹೊಡೆದು ಅರೆಸ್ಟ್ ಮಾಡುವ ಕೆಲಸ ಮಾಡ್ತಾರೆ. 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಹಲವರಿಗೆ ಮಾನಸಿಕ ನೋವಿದೆ. ಶಿಕ್ಷಣ ಸಚಿವರಿಗೆ ಜವಾಬ್ದಾರಿ ಇಲ್ವಾ? ರಾಜೀನಾಮೆ ಕೇಳೋದು ತಪ್ಪಾ? ಎಂದರು.

ಅನ್ಯಾಯವೇ ಕಾನೂನಾದ್ರೆ ಪ್ರತಿಭಟನೆ ಈ ದೇಶದ ಜನರ ಕರ್ತವ್ಯ ಆಗುತ್ತೆ, ಇವತ್ತು ಯಾವುದನ್ನೂ ಚರ್ಚೆ ಮಾಡುವ ಹಾಗಿಲ್ಲ, ದೇಶದಲ್ಲಿ ಗಾಂಧೀಜಿ ಕನಸಿನ ಭಾರತದ ವಿರುದ್ದವಾದ ಆಡಳಿತ ಇದೆ. ಮಂತ್ರಿ ಯಾಕೆ ರಾಜೀನಾಮೆ ಕೊಡಬೇಕು ಅಂತ ಕೇಳ್ತಾರೆ. ಹಾಗಾದರೆ ಕೆ.ಜೆ.ಚಾರ್ಜ್, ನಾಗೇಂದ್ರ ರಾಜೀನಾಮೆ ಕೇಳಿದ್ದು ಯಾಕೆ?. ಬಿಜೆಪಿ ಗೆ ನೈತಿಕತೆ ಇಲ್ವಾ? ವಿದ್ಯಾರ್ಥಿಗಳಿಗೆ ಹೊಡೆಯೋದನ್ನ ಯಾರೂ ಸಹಿಸಲ್ಲ. ಇದಕ್ಕೆ ದೇಶ ತಕ್ಕ ಉತ್ತರ ಕೊಡ್ತದೆ, ಇದು ಭವಿಷ್ಯದ ಭಾರತದ ಮೇಲೆ ಮಾಡಿದ ಅವಮಾನಕಾರಿ ಕೃತ್ಯ ಎಂದರು.

ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ತಕ್ಷಣ ಸಂಬಂಧಿಸಿದ ಮಂತ್ರಿ ರಾಜೀನಾಮೆ ಕೊಡಲೇ ಬೇಕು. ಕೇಂದ್ರ ಸರ್ಕಾರ ನೀಟ್ ಮಾಡಿ ರಾಜ್ಯಗಳಿಗೆ ಅನ್ಯಾಯ ಮಾಡಿದೆ. ಪ್ರಧಾನ ಮಂತ್ರಿ ಇನ್ನಾದ್ರೂ ಮೌನ ಮುರಿಯಲಿ. ಬಿಜೆಪಿಯವರು ಬಾಯಿ ಮುಚ್ಚಿ ಕೂತಿದ್ದನ್ನ ದೇಶದ ಜನತೆ ಗಮನಿಸಿದೆ ಎಂದರು.