ಮಂಗಳೂರು: ಯಕ್ಷ ಧ್ರುವ ಪಟ್ಲ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರ ಕನಸಿನ “ಪಟ್ಲ ಯಕ್ಷಾಶ್ರಯ ” ಯೋಜನೆಯ 30 ನೇ ಮನೆಯನ್ನು ಫಲಾನುಭವಿ ಶ್ರೀ ಕಟೀಲು ಮೇಳದ ಒಂದನೇ ಸೆಟ್ ನ ಕಲಾವಿದ ಪ್ರಶಾಂತ್ ಕಲ್ಲಡ್ಕರವರಿಗೆ ಹಸ್ತಾಂತರಿಸಲಾಯಿತು.

ಯಕ್ಷಧ್ರುವ ಪಟ್ಲ ಟ್ರಸ್ಟಿನ ಮಹಾದಾನಿಗಳೂ , ಪ್ರತಿಷ್ಠಿತ MRG ಸಮೂಹ ಸಂಸ್ಥೆಗಳ ಮಾಲಕರಾದ ಡಾ. ಕೊರಂಗ್ರಪಾಡಿ ಪ್ರಕಾಶ ಶೆಟ್ಟಿಯವರು ಕೊಡುಗೆಯಾಗಿ ನೀಡಿದ ಈ ಮನೆಯ ಕೀಲಿ ಕೈ ಹಸ್ತಾಂತರ ಸಂದರ್ಭದಲ್ಲಿ ಟ್ರಸ್ಟಿನ ಬಂಟ್ವಾಳ ಘಟಕದ ಅಧ್ಯಕ್ಷ ಚಂದ್ರಹಾಸ ಡಿ ಶೆಟ್ಟಿ ರಂಗೋಲಿ, ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ ಅಡ್ಯಾರ್ ಹಾಗೂ ಶ್ರೀಕಾಂತ್ ಅರಳ ಉಪಸ್ದಿತರಿದ್ದರು.