ಮಂಗಳೂರು: ಗುರು ಹಿರಿಯರಿಗೆ ಗೌರವ ನೀಡುವುದು ಹಿಂದು ಧರ್ಮದ ಶ್ರೇಷ್ಠ ಪದ್ಧತಿ. ಭಗತ್ ಸಿಂಗ್ ಪ್ರತಿಷ್ಠಾನದ ಸದಸ್ಯರು ಇದನ್ನು ಗುರುವಂದನೆ ಕಾರ್ಯಕ್ರಮ ಮುಖೇನ ಅರ್ಥಪೂರ್ಣ ವಾಗಿ ಪಾಲಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಬಿ.ಜೆ.ಪಿ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಹೇಳಿದರು.
ಅವರು ಪಜೀರು, ಬೀಜಗುರಿ ಗೋವನಿತಾಶ್ರಮ ದಲ್ಲಿ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಹಿರಿಯ ನಾಟಿ ವೈದ್ಯರಾದ ಪಾವೂರು ಭಂಡಾರಮನೆ ಉಗ್ಗಪ್ಪ ಪೂಜಾರಿ ಯವರಿಗೆ ಗುರುವಂದನೆ ಸಲ್ಲಿಸಿ ಮಾತನಾಡಿದರು.
ದೇರಳಕಟ್ಟೆ ವಿದ್ಯಾ ರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡುತ್ತಾ ಜಗತ್ತಿಗೆ ಗುರುಸ್ಥಾನ ದಲ್ಲಿರುವ ವ್ಯಾಸ ಮಹರ್ಷಿಗಳ ಜನ್ಮದಿನ ಗುರುಪೂರ್ಣಿಮೆ ಪ್ರಯುಕ್ತ ಪ್ರತಿಷ್ಠಾನ ಹಿರಿಯರಿಗೆ ಗೌರವ ನೀಡುತ್ತಿರುವುದು ಮಾದರಿ ಕಾರ್ಯ ಎಂದರು.
ಗುರುವಂದನೆ ಸ್ವೀಕರಿಸಿದ ಉಗ್ಗಪ್ಪ ಪೂಜಾರಿ ಯವರು ಪ್ರಾಮಾಣಿಕ ವಾಗಿ ನಾನು ನಡೆಸುತ್ತಿರುವ ಕಾರ್ಯ ಕ್ಕೆ ನನ್ನ ಕುಟುಂಬದ ಸಹಕಾರ ಮತ್ತು ಜನರ ಪ್ರೋತ್ಸಾಹ ದೊರತಿರುವುದು ನನ್ನ ಪುಣ್ಯವಾಗಿದೆ ಎಂದರು. ಈ ಸಂಧರ್ಭದಲ್ಲಿ ಅವರ ಧರ್ಮಪತ್ನಿ ಶ್ರೀಮತಿ ರಾಜೀವಿ ಜತೆಯಲ್ಲಿದ್ದರು.
ಇನ್ನೋಳಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಚಂದ್ರಹಾಸ ಪೂಂಜಾ, ಬಿ.ಜೆ.ಪಿ.ಯ ಹಿರಿಯರಾದ ಹರಿಯಪ್ಪ ಸಾಲ್ಯಾನ್, ಪ್ರತಿಷ್ಠಾನದ ಗೌರವ ಸಲಹೆಗಾರ ರಾದ ಆನಂದ ಕೆ.ಅಸೈಗೋಳಿ, ಗೌರವಾಧ್ಯಕ್ಷರಾದ ರಾಕೇಶ್ ಕುಮಾರ್, ಉಪಾಧ್ಯಕ್ಷರಾದ ಗೋಪಿನಾಥ್ ಬಗಂಬಿಲ, ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ಗುರುವಂದನೆ ಸಂಚಾಲಕರಾದ ರಾಜೇಂದ್ರ ಸೇವಂತಿಗುಡ್ಡೆ, ವೃಕ್ಷಾಂಕುರ ರಕ್ಷಾ ಸಂಚಾಲಕರಾದ ಪ್ರಸಾದ್ ಕೊಂಡಾಣ, ಪ್ರಮುಖರಾದ ಮೋಹನ್ ಸಾಲ್ಯಾನ್, ದಾಮೋದರ ನಡಾರ್, ರಮೇಶ್ ಸಾಮಾನಿ, ಶರತ್ ಭಂಡಾರಿ ಪನೀರ್, ನವೀನ್ ಎ.ಕೆ., ದೀಕ್ಷಿತ್ ನಿಸರ್ಗ, ಶಿವಾಜಿ ಕುತ್ತಾರು, ಸುಧಾಕರ್ ಬಜಾಲ್, ಚಂದ್ರಶೇಖರ ಕೊಲ್ಯ, ರಾಜೇಶ್, ಗಂಗಾಧರ ಅಂಬ್ಲಮೊಗರು, ವಿಶ್ವನಾಥ ಏಲ್ಯಾರ್ ಪದವು, ಬಿ.ಜೆ.ಪಿ. ಕೋಣಾಜೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವಿಜೇತ್ ಪಜೀರು, ವೇಣುಗೋಪಾಲ, ಸುಭಾಷ್ ಬೋಳಿಯಾರ್, ಇತರರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು ಪ್ರಸ್ತಾವನೆಗೈದರು, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ಗುರುವಂದನೆ ಪತ್ರ ವಾಚಿಸಿದರು, ಕಾರ್ಯದರ್ಶಿ ಕಿರಣ್ ಕೊಲ್ಯ ವಂದಿಸಿದರು, ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಪೊನ್ನೊತ್ತೋಡು ಕಾರ್ಯಕ್ರಮ ನಿರೂಪಿಸಿದರು.

