ಮಂಗಳೂರು : ಪಂಜಾಬ್ನಲ್ಲಿ ಮಳೆ, ಪ್ರಾಕೃತಿಕ ವಿಕೋಪದಿಂದ ಕೃಷಿಕರು ಭೂಮಿ ಕಳೆದುಕೊಂಡು ಮನೆ ಇಲ್ಲದೇ ನಿರಾಶ್ರಿತರಾಗಿದ್ದು, ಅವರ ಸಹಾಯಕ್ಕೆ ರಾಜ್ಯದ ಗುರುದ್ವಾರಗಳು ಮುಂದಾಗಿವೆ.
ಅದರಂತೆ ಬೆಂಗಳೂರಿನ ಅಲಸೂರಿನಲ್ಲಿರುವ ಶ್ರೀ ಸಿಂಗ್ ಸಭಾ ಗುರುದ್ವಾರದ ನೇತೃತ್ವದಲ್ಲಿ ಮಂಗಳೂರಿನ ಸಿಖ್ ಸಮುದಾಯದವರು ನಗರದ ಕೊಟ್ಟಾರ ಚೌಕಿ ರಾಷ್ಟ್ರೀಯ ಹೆದ್ದಾರಿ ಬಳಿ ನಿಧಿ ಸಂಗ್ರಹ ಅಭಿಯಾನ ನಡೆಸಿದ್ದರು.
ಮಂಗಳೂರಿನ ಕೊಟ್ಟಾರ ಚೌಕಿ ಜಂಕ್ಷನ್ಬನಲ್ಲಿ ನಿಧಿ ಸಂಗ್ರಹ ಕೌಂಟರ್ ತೆರೆಯಲಾಗಿದ್ದು. ಸಾರ್ವಜನಿಕರು ಹಾಗೂ ವಾಹನ ಸವಾರರು, ಪಾದಚಾರಿಗಳು ತಮ್ಮಿಂದ ಆಗುವ ಸಹಾಯವನ್ನು ಮಾಡಿದ್ದಾರೆ.

ಪಂಜಾಬ್ ರಾಜ್ಯದಲ್ಲಿ ನೆರೆಯಿಂದಾಗಿ ಸಾಕಷ್ಟು ಮಂದಿ ತಮ್ಮ ಕೃಷಿ ಮತ್ತು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಅವರ ನೆರವಿಗೆ ಬರಲು ದೇಶದ ವಿವಿಧೆಡೆಯ ಗುರುದ್ವಾರಗಳು ಮುಂದಾಗಿವೆ.
ಈಗಾಗಲೇ ಉತ್ತರ ಭಾರತದ ವಿವಿಧ ರಾಜ್ಯಗಳು ದಿನ ಬಳಕೆ ಸಾಮಗ್ರಿಗಳನ್ನು ಸ್ಥಳಕ್ಕೆ ರವಾನಿಸಿವೆ. ಮುಂದಿನ ದಿನಗಳಲ್ಲಿ ಅವರಿಗೆ ಮನೆಗಳನ್ನು ಕಟ್ಟಿಕೊಡುವ ಕೆಲಸ ಆಗಬೇಕಾಗಿದ್ದು ಅದಕ್ಕಾಗಿ ನಿಧಿ ಸಂಗ್ರಹ ಕಾರ್ಯಕ್ಕೆ ಮುಂದಾಗಿದ್ದೇವೆ. ಇಲ್ಲಿನ ಸಂಗ್ರಹವಾಗುವ ನಿಧಿಯನ್ನು ಬೆಂಗಳೂರಿನ ಗುರುದ್ವಾರದ ಮೂಲಕ ಪಂಜಾಬ್ನಲ್ಲಿರುವ ನಿರಾಶ್ರಿತರಿಗೆ ಸೌಕರ್ಯ ಕಲ್ಪಿಸಲು ಬಳಸಲಾಗುವುದು ಎಂದರು.
ಈ ಸಂದರ್ಭ ಸಿಖ್ ಸಮುದಾಯದ ಬಲ್ವಿಂದರ್ ಸಿಂಗ್, ಇಕ್ಬಾಲ್ ಸಿಂಗ್ ರಾಥೋಡ್, ದರ್ಶನ್ ತಲ್ರೇಜಾ, ಉಮೇಶ್ ಸಿಂಗ್, ಸುಖ್ವಿಂದರ್ ಸಿಂಗ್ ರಾಥೋಡ್, ಹರ್ಭಜನ್ ಸಿಂಗ್ ರಾಂದ್ವಾ ಉಪಸ್ಥಿತರಿದ್ದರು.

