ಕಬಕ: ಅಲ್ ಇಸ್ಲಾಹ್ ಸಾಹಿತ್ಯ ಸಮಾಜ ವಿದ್ಯಾಪುರ ಕಬಕ ಇದರ 25 ನೇ ವಾರ್ಷಿಕೋತ್ಸವದ ಪ್ರಯುಕ್ತ ಏಪ್ರಿಲ್ 27 ರಂದು ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಯಿತು.
ಶಿಬಿರದಲ್ಲಿ ಜನಪ್ರಿಯ ಆಸ್ಪತ್ರೆ ಯ ವಿವಿಧ ವಿಭಾಗಗಳ ತಜ್ಞರು ಭಾಗವಹಿಸಿ , ರೋಗಿಗಳಿಗೆ ತಪಾಸಣೆ ನಡೆಸಿ ,ಅಗತ್ಯ ಔಷಧಿಗಳನ್ನು ನೀಡಿದರು. ವಿಶೇಷವಾಗಿ ಮಕ್ಕಳ ಆರೋಗ್ಯ ತಪಾಸಣೆ, ವಿಶಿಷ್ಟ ಸಲಹೆಗಳು ಹಾಗೂ ಪೋಷಕರಿಂದ ಉತ್ತಮ ಪ್ರತಿಕ್ರಿಯೆಯೊಂದಿಗೆ ಶಿಬಿರ ಯಶಸ್ವಿಯಾಗಿ ನೆರವೇರಿತು. ಆರೋಗ್ಯದ ಕಡೆಗೆ ಹೆಜ್ಜೆ ಹಾಕಿದ ಪುಟಾಣಿ ಮಕ್ಕಳ ಮುಖದಲ್ಲಿದ್ದ ನಗೂ ಈ ಶಿಬಿರದ ಯಶಸ್ಸಿಗೆ ಸಾಕ್ಷಿಯಾದವು.

ಕಾರ್ಯಕ್ರಮದಲ್ಲಿ ಅಲ್ ಇಸ್ಲಾಹ್ ಸಾಹಿತ್ಯ ಸಮಾಜ ಇದರ ಗೌರವಾಧ್ಯಕ್ಷರಾದ ಬಹು. ಸೈಯದ್ ಯಹ್ಯಾ ತಂಗಲ್ , ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದರ ನಿರ್ದೇಶಕರಾದ ಡಾ .ನುಮಾನ್ , ಕಬಕ ಗ್ರಾಮ ಪಂಚಾಯತ್ ಸದಸ್ಯರಾದ ಫಾರೂಕ್ ತವಕ್ಕಲ್ , ಕೆಪಿಸಿಸಿ ಕಾರ್ಮಿಕ ಸಮಿತಿ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ , ಜನಪ್ರಿಯ ಆಸ್ಪತ್ರೆಯ PRO ಭಾತಿಷ್ ಅಳಕೆಮಜಲು , ಅನ್ಸಫ್ ಕಬಕ ಹಾಗೂ ಹಲವಾರು ಮುಖಂಡರು ಭಾಗವಹಿಸಿ ಕಾರ್ಯಕ್ರಮಕ್ಕೆ ಹಾರೈಸಿದರು.

