ಮಂಗಳೂರು: ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಇವರ ಸತತ 6ನೇವರ್ಷದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ, ಕುಳಾಯಿಯಲ್ಲಿ ನಡೆಯಿತು.

ಸರಳ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಸತೀಶ್ ಕುಂಪಲ, ಜಿಲ್ಲಾಧ್ಯಕ್ಷರು, ಬಿ.ಜೆ.ಪಿ. ದ.ಕ. ಜಿಲ್ಲೆ, ಶ್ರೀ ನಂದನ್ ಮಲ್ಯ, ಜಿಲ್ಲಾಧ್ಯಕ್ಷರು ಬಿ.ಜೆ.ಪಿ ಯುವ ಮೋರ್ಚಾ, ಶ್ರೀ ಸುಜಿತ್ ಆಳ್ವ ಅದ್ಯಪಾಡಿ, ಯುವ ಉದ್ಯಮಿ , ರಮಾನಂದ ಪೂಜಾರಿ ಬೋಳಾರ, ಯುವ ಉದ್ಯಮಿ, ಕಿರಣ್ ಕುಮಾರ್, M.D. ಸಾನಿಧ್ಯ ಎಂಟರ್‌ಪ್ರೈಸಸ್, ಸತೀಶ್ ಮುಂಚೂರು, ಜಿಲ್ಲಾ ಬಿ.ಜೆ.ಪಿ. ಕಾರ್ಯಕಾರಿ ಸದಸ್ಯರು.

ಶ್ರೀಮತಿ ಕೆ. ಕಲಾವತಿ, ಸಂಚಾಲಕರು, ವೆಂಕಟ್ರಮಣ ಹಿ.ಪ್ರಾ.ಶಾಲೆ, ಕುಳಾಯಿ ,ಗೋಪಾಲ್ ವಿ., ಮುಖ್ಯೋಪಾಧ್ಯಾಯರು, ವೆಂಕಟ್ರಮಣ ಹಿ.ಪ್ರಾ.ಶಾಲೆ, ಕುಳಾಯಿ, ಲೋಕೇಶ್ ಕೋಡಿಕೆರೆ, ಸ್ಥಾಪಕಾಧ್ಯಕ್ಷರು ತುಳುನಾಡ ಬಿರುವೆರ್ (ರಿ) ವಿಶ್ವನಾಥ್ ಕೋಡಿಕೆರೆ, ಅಧ್ಯಕ್ಷರು ತುಳುನಾಡ ಬಿರುವೆರ್ ಮತ್ತಿತರರು ಇದ್ದು ಈ ಸಭಾ ಕಾರ್ಯಕ್ರಮವನ್ನ ದೀಪ ಪ್ರಜ್ವಲನೆ ಮುಖ್ಯ ಅತಿಥಿಗಳು ಉದ್ಘಾಟಿಸಿದರು .

ಬಳಿಕ ನಂದನ್ ಮಲ್ಯ , ಸತೀಶ್ ಕುಂಪಲ ಸಭೆಯನ್ನು ಉದ್ದೇಶಿಸಿ ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಈ ರೀತಿ ಸಮಾಜ ಮುಖಿ ಕಾರ್ಯ ಮಾಡೋದನ್ನ ಶ್ಲ್ಯಾಘಿಸಿ ಶುಭಹಾರೈಸಿದರು. ಬಳಿಕ ಮಕ್ಕಳಿಗೆ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರನಿಯನ್ನ ಮಾಡಲಾಯಿತ್ತು, ಈ ಸಂದರ್ಭದಲ್ಲಿ ಸಮಾಜಸೇವೆಯಲ್ಲಿ ನಿರತರಾಗಿರುವ ನಟರಾಜ್ ಇವರನ್ನ ಈ ಸಂದರ್ಭದಲ್ಲಿ ಅಭಿನಂದಿಸಲಾಯಿತ್ತು