ಮಂಗಳೂರು : ಉಡುಪಿ ಜಿಲ್ಲಾಧಿಕಾರಿ ಕೇಸರಿ ಧ್ವಜ ಹಿಡಿದ ವಿಚಾರವಾಗಿ ಮಾಜಿ ಸಚಿವ ರಮಾನಾಥ್ ರೈ ಹೇಳಿಕೆ ವ್ಯೆರಲ್ ಹಿನ್ನಲೆಯಿಂದ ರಮಾನಾಥ್ ರೈ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ದೇವಸ್ಥಾನ ಕಾರ್ಯಕ್ರಮದಲ್ಲಿ ಕೇಸರಿ ಧ್ವಜ ಹಾರಾಟ ವಿಚಾರವಾಗಿ ಉಡುಪಿಯಲ್ಲಿ ಕೆಲವರಿಂದ ಟೀಕೆ ಬಂತು. ಜಿಲ್ಲೆಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಇದ್ದವರು ಕೇಸರಿ ಧ್ವಜ ಸಹಿತ ಬೇರೆ ಧ್ವಜ ಹಾಕಬಾರದು ಎಂದು ಹೇಳಿಕೆ ಕೊಟ್ಟಿದ್ದೆ, ಜಿಲ್ಲಾಧಿಕಾರಿ ಯಾವುದೇ ಧರ್ಮದ ಧ್ವಜ ಹಾಕಬಾರದು ಎಂದೇ ಹೊರತು ದೇವಸ್ಥಾನಕ್ಕೆ ಅಲ್ಲಾ ಎಂದರು.

ಅಪ ಪ್ರಚಾರದ ಕುರಿತು ರಮಾನಾಥ ರೈ ಸ್ಪಷ್ಟನೆ ನೀಡಿದ್ದಾರೆ. ಬುಧವಾರ ಜಿಲ್ಲಾಧಿಕಾರಿ ಧ್ವಜ ಹಿಡಿದ ರಮಾನಾಥ್ ರೈ ಹೇಳಿಕೆ ವೈರಲ್ ಆಗಿತ್ತು.