ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹೂವಿನ ಪೂಜೆ ದರ ಏರಿಕೆ ಮಾಡಿದ್ದು, ಇದೀಗ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

120 ಇದ್ದ ದರವನ್ನು 220 ಕ್ಕೆ ಏರಿಕೆ ಮಾಡಿದ್ದಾರೆ. ಇನ್ನು ಮುಂದೆ ಹೂವಿನ ಪೂಜೆ ಮಾಡಿಸಿ ಸರ್ಕಾರದ ಬೊಕ್ಕಸವನ್ನು ತುಂಬಿಸುವ ಬದಲು ದೇವಿಗೆ ಇಷ್ಟವಾದ ಮಲ್ಲಿಗೆ ಹಾಗೂ ಏಳನೀರನ್ನು ಸಮರ್ಪಿಸಿ ಎಂದು ಸೋಶಿಯಲ್​​ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದಾರೆ.