ಮಂಗಳೂರು: ನಗರದ ಹಂಪನಕಟ್ಟೆಯಲ್ಲಿ ಶೂ ಶಾಪ್ ವೊಂದಕ್ಕೆ ಬೆಂಕಿ ತಗುಲಿ ಅಂಗಡಿ ಸಂಪೂರ್ಣ ಭಸ್ಮಗೊಂಡ ಘಟನೆ ಇಂದು ಬೆಳ್ಳಗೆ ನಡೆದಿದೆ.

ಬೆಂಕಿ ಕೆನ್ನಾಲೆ ಪಕ್ಕದರೆಡು ಅಂಗಡಿಗೂ ವ್ಯಾಪಿಸಿದೆ. ಯುರೋಪ್ ಶೂ ಅಂಗಡಿ ಸಂಪೂರ್ಣ ಭಸ್ಮಗೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ತಂಡ ಅಗಮಿಸಿದ್ದು ಬೆಂಕಿ ನಂದಿಸುವ ಕಾರ್ಯಚರಣೆ ನಡೆಯುತ್ತಿದೆ.

ಮೇಲ್ನೋಟಕ್ಕೆ ಇದು ಶಾಟ್೯ ಸಕ್ರ್ಯೂಟ್ ನಿಂದಾಗಿ ಅವಘಡ ಸಂಭವಿಸಿದೆ ಎನ್ನಲಾಗಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.