ಮಂಗಳೂರು: ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದಾರೆ ಎಂದು ಸುಳ್ಳು ಸುದ್ದಿ. ಸರ್ಕಾರ ಗ್ಯಾರಂಟಿ ಯೋಜನೆ ನೀಡಿ ಖಜಾನೆ ಖಾಲಿ ಆಗಿದೆ. ಸರ್ಕಾರದಲ್ಲಿ ದುಡ್ಡಿಲ್ಲ ಅದಕ್ಕೆ ಬಿಪಿಎಲ್ ಕಾರ್ಡ್ ರದ್ದು ಮಾಡ್ತಾ ಇದ್ದಾರೆ ಎಂಬ ಬಿಜೆಪಿ ಆರೋಪ ಎಂದು ಮಂಗಳೂರಿನಲ್ಲಿ ಎಂಎಲ್ಸಿ ಐವನ್ ಡಿಸೋಜ ಸುದ್ದಿಗೋಷ್ಟಿ ನಡೆಸಿ ಹೇಳಿಕೆ ನೀಡಿದರು.
ಅನರ್ಹರು ಕೂಡಾ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಒಟ್ಟು ಜಿಲ್ಲೆಯಲ್ಲಿ ೩೪೦ ಕಾರ್ಡ್ ರದ್ದು ಮಾಡಲಾಗಿದೆ. ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ ಹೇಳಿಕೆ ಕೊಡ್ತಾ ಇದ್ದಾರೆ. ರಾಜಕೀಯ ಪ್ರೇರಿತ ಹೇಳಿಕೆ ಇವರದ್ದು. ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಅರ್ಹರ ಕಾರ್ಡ್ ರದ್ದು ಮಾಡಲ್ಲ. ಶಾಸಕರು ಸುಳ್ಳು ಪ್ರಚಾರ ಮಾಡ್ತಾ ಇದ್ದಾರೆ ಎಂದರು.
ಗ್ಯಾರಂಟಿ ಯೋಜನೆಯಲ್ಲಿ ಸಮಸ್ಯೆ ಇದ್ದರೆ ಗ್ರಾಮ ವ್ಯಪ್ತಿಯಲ್ಲಿ ವಿಲೇವಾರಿ ಶಿಬಿರ ಆಯೋಜನೆ ಆಗ್ತಾ ಇದೆ. ನಗರದಲ್ಲಿ ವಾರ್ಡ್ ವಾರು ವಿಲೇವಾರಿ ಶಿಬಿರ ಆಗ್ತಾ ಇದೆ. ಗೃಹ ಲಕ್ಷ್ಮಿ ಯೋಜನೆಯಲ್ಲಿ ಈ ವರೆಗೆ ೧೪ ಕಂತು ಬಿಡುಗಡೆ ಆಗಿದೆ. ಗೃಹ ಜ್ಯೋತಿ ಯೋಜನೆಯಲ್ಲಿ ೦% ತೊಂದರೆ. ಗ್ಯಾರಂಟಿ ಯೋಜನೆಯಲ್ಲಿ ಯಾವುದೇ ಸಮಸ್ಯೆ ಇದ್ರೆ ತಿಳಿಸಿ. ಜಿಲ್ಲೆಯಲ್ಲಿ ಶಕ್ತಿ ಯೋಜನೆ ಸಮಸ್ಯೆ ಇದೆ ಎಂದರು.
ಜಿಲ್ಲೆಯ ಖಾಸಗಿ ಬಸ್ ಹೆಚ್ಚಿದ್ದು ಈ ಯೋಜನೆ ಪ್ರಯೋಜನ ಆಗ್ತಾ ಇಲ್ಲ. ವಿಧಾನ ಪರಿಷತ್ ನಲ್ಲಿ ಈ ಬಗ್ಗೆ ಮಾತನಾಡಲಿದ್ದೇನೆ. ಮಂಗಳೂರು ಮೂಡಬಿದಿರೆ ಸಂಚಾರಕ್ಕೆ ಸರ್ಕಾರಿ ಬಸ್ ವ್ಯವಸ್ಥೆ. ಶೀಘ್ರದಲ್ಲೇ ಮಂಗಳೂರು ಮೂಡಬಿದಿರೆ ರಸ್ತೆಗೆ ೬ ಬಸ್ ತಾತ್ಕಾಲಿಕ ಪರ್ಮಿಟ್ ನೀಡಲಾಗುತ್ತೆ. ಬಿಜೆಪಿ ಶಾಸಕರು ಅಭಿವೃದ್ಧಿ ವಿರೋಧಿಗಳು ಎಂದರು.
ಬಿಜೆಪಿಗರು ಬಡವರಿಗೆ ಸಿಗುವ ಯೋಜನೆಗೆ ವಿರುದ್ಧ ಇದ್ದಾರೆ. ಬಿಜೆಪಿ ಶಾಸಕರು ರಸ್ತೆ, ತೋಡು ಬಿಟ್ಟು ಬೇರೆ ಏನು ಕೇಳಲ್ಲ. ಬಿಜೆಪಿ ಆರು ಶಾಸಕರಿದ್ದಾರೆ ಪತ್ರ ಬಿಡುಗಡೆ ಮಾಡಲಿ ಎಷ್ಟು ಶೇ. ಗ್ಯಾರಂಟಿ ಯಾರಿಗೆಲ್ಲ ಸಿಕ್ಕಿಲ್ಲ ಎಂದು ಎಂಎಲ್ಸಿ ಐವನ್ ಡಿಸೋಜ ಹೇಳಿಕೆ ನೀಡಿದರು.

