ಮಂಗಳೂರು : ನಕಲಿ ಚಿನ್ನದ ಆರೋಪಿ ಅಬೂಬಕ್ಕರ್ ಸಿದ್ದೀಕ್ ಗೆ ಶೋಧ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಹೇಳಿಕೆ ನೀಡಿದ್ದಾರೆ.

ನಕಲಿ ಚಿನ್ನ ಅಡವಿಟ್ಟು ೨,೧೧,೮೯,೮೦೦ ಕೋಟಿ ರೂ. ಸಾಲ ಪಡೆದು ವಂಚಿಸಿದ್ದು, ಮಂಗಳೂರಿನ ಪಡೀಲ್ ಬಳಿಯ ಸಮಾಜ ಸೇವಾ ಸಂಘದಲ್ಲಿ ಹಗರಣ ನಡೆದಿದೆ. ಚಿನ್ನ ಪರೀಕ್ಷಕ, ಬ್ಯಾಂಕ್ ಸಿಬ್ಬಂದಿ, ಆಡಳಿತ ಮಂಡಳಿ ಶಾಮೀಲು ಶಂಕೆ ವ್ಯಕ್ತವಾಗಿದೆ.

೨೦೨೩ರ ನವೆಂಬರ್ ನಿಂದ ೨೦೨೪ರ ಫೆಬ್ರವರಿವರೆಗೆ ಲೂಟಿ ಮಾಡಿದ್ದು, ವಿವೇಕ್ ಆಚಾರ್ಯ ಸಹಿತ ೨೮ ಜನರ ವಿರುದ್ದ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ಅಬೂಬಕ್ಕರ್ ಸಿದ್ದೀಕ್ ಗಾಗಿ ಶೋಧ ನಡೆಸಲಾಗುತ್ತಿದೆ. ಎರಡನೇ ಆರೋಪಿ ವಿವೇಕ್ ಆಚಾರ್ಯ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಹೇಳಿದ್ದಾರೆ.