ಮಂಗಳೂರು : ಕರಾವಳಿಯಲ್ಲಿ ಮಳೆಯಿಂದ ವ್ಯಾಪಕ ನಾಶ ನಷ್ಟ ಉಂಟಾಗಿದೆ, ಸರಕಾರ ಕೂಡಲೇ ಇದಕ್ಕೆ ಪರಿಹಾರ ನೀಡಬೇಕೆಂದು , ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಳ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಳ್ಳಾಲದ ಮಂಜನಾಡಿಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆ ಮನಸಿಗೆ ತುಂಬಾನೇ ನೋವು ತಂದಿದೆ. ಅವರಿಗೆ ಕೂಡಲೇ ಪರಿಹಾರ ನೀಡಬೇಕು. ಉಸ್ತುವಾರಿ ಸಚಿವರು ಮುಂಗಾರು ಪೂರ್ವ ಯಾವುದೇ ಸಭೆಗಳನ್ನು ನಡೆಸಲಿಲ್ಲ. ಜಿಲ್ಲಾಡಳಿತ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿಲ್ಲ.
ಸರಕಾರ ಮನೆ ಕಳೆದು ಕೊಂಡವರಿಗೆ ಪರಿಹಾರ ನೀಡುತ್ತೆ, ಅದರಂತೆ ಕೌಪಾಂಡ್ ಬಿದ್ದು ಹಾನಿ ಉಂಟಾದರು ಪರಿಹಾರವನ್ನು ನೀಡಬೇಕು. ಅನಿಶ್ಚಿತತೆ ನಡೆಯೊ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವನ್ನು ವಹಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ವೈ ಭರತ್ ಶೆಟ್ಟಿ, ಸುಳ್ಯ ಶಾಸಕಿ ಭಾಗೀರಥಿ ಮುರೋಳಿಯ, ಯತೀಶ್ ಆಳ್ವ, ಪ್ರೇಮಾನಂದ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.

