ಮಂಗಳೂರು: ಸಮಾಜಸೇವೆ ಹೆಸರಲ್ಲಿ ಆಂಬುಲೆನ್ಸ್ ನಲ್ಲಿ ಡ್ರಗ್ಸ್ ದಂಧೆ ಪ್ರಕರಣ ಬೆಳಕಿಗೆ ಬಂದ ಬಳಿಕ ಬೆಳ್ತಂಗಡಿಯ ಜಲೀಲ್ ಬಾಬಾ ನಾಪತ್ತೆಯಾಗಿದ್ದಾನೆ.

ಆ್ಯಂಬುಲೆನ್ಸ್ ನಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದನು. ಸಿಸಿಬಿ ಶೋಕಿಲಾಲ ನಿಗಾಗಿ ಶೋಧ ನಡೆಸುತ್ತಿದ್ದಾರೆ. ಬೆಳ್ತಂಗಡಿಯ ಬಾಬಾ ಆ್ಯಂಬುಲೆನ್ಸ್ ಚಾಲಕ ಜಲೀಲ್. ಇತ್ತೀಚೆಗೆ ಬಾಗಲಕೋಟೆಯಲ್ಲಿ ಐದು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಮಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಜಲೀಲ್ ಪ್ರಕರಣದ ನಾಲ್ಕನೇ ಆರೋಪಿಯಾಗಿದ್ದಾನೆ. ಜಿಲ್ಲೆಯಲ್ಲಿ ಆ್ಯಂಬುಲೆನ್ಸ್ ನಲ್ಲಿ ಜಲೀಲ್ ಡ್ರಗ್ಸ್ ಸಪ್ಲೈ ಮಾಡುತ್ತಿದ್ದನು. ಸಮಾಜಸೇವೆ ಹೆಸರಿನಲ್ಲಿ ಒಳ್ಳೆಯವನಾಗಿ ಜಲೀಲ್ ಬಿಂಬಿತವಾಗಿದ್ದನು.
ಬೆಳ್ತಂಗಡಿ ಯ ಹೀರೋ ಎಂಬಂತೆ ಜಲೀಲ್ ಬಿಂಬಿತವಾಗಿದ್ದನು. ಮೂವರು ಡ್ರಗ್ಸ್ ಪೆಡ್ಲರ್ ಗಳು ಬಂಧನ ವಾಗುತ್ತಿದ್ದಂತೆಯೇ ಜಲೀಲ್ ಪರಾರಿಯಾಗಿದ್ದಾನೆ. ಮೊಬೈಲ್ ಸ್ವಿಚ್ ಆಫ್ ಮಾಡಿ ಆ್ಯಂಬುಲೆನ್ಸ್ ಜೊತೆಗೆ ಜಲೀಲ್ ಪರಾರಿಯಾಗಿದ್ದಾನೆ.