ಮಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸುದ್ದಿಗೋಷ್ಟಿ ನಡೆಸಿ, ಶಾಸಕರ ಅಮಾನತು ಶಿಕ್ಷೆ ಅಂತ ಭಾವಿಸೋದು ಬೇಡ. ಅವರು ಮತ್ತಷ್ಟು ಸರಿಯಾಗಿ ತಿದ್ದಿಕೊಂಡು ಕೆಲಸ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆವತ್ತು ನಡೆದ ಘಟನೆ ರಾಜ್ಯದ ಜನತೆಗೆ ಅಸಹ್ಯ ಮೂಡಿಸಿದೆ ಎಂದರು.

ರಾಜಕೀಯದವರು ಇರೋದು ಕೇವಲ ಐದು ಶೇಖಡಾ ಮಾತ್ರ, 95% ಜನರು ಈ ರಾಜ್ಯದ ಇತರೆ ಶ್ರಮಿಕ ವರ್ಗ ಇದೆ. ಸಂವಿಧಾನ ಉಳಿಸಲು ಎಲ್ಲರೂ ಕೂಡ ಪ್ರಯತ್ನ ಪಡ್ತಾ ಇದಾರೆ. ಕೆಲವೇ ಕೆಲವು ಜನ ಈ ರೀತಿ ಅಸಹ್ಯ ಪರಿಸ್ಥಿತಿ ಸೃಷ್ಟಿಸಿದರು. ಇದರಿಂದ ರಾಜ್ಯದ ಘನತೆ ಎಲ್ಲಿಗೆ ಬಂದಿದೆ ಅನ್ನೋ ಪ್ರಶ್ನೆ ಮೂಡಿದೆ. ಆರು ತಿಂಗಳು ಯಾಕೆಂದ್ರೆ, ಹಿಂದೆ ಅಧಿವೇಶನ ಇರೋ ತನಕ ಅಮಾನತು ಮಾಡಲಾಗ್ತಿತ್ತು ಎಂದರು.

ಆದರೆ ಈ ಘಟನೆ ನಡೆದಿದ್ದು ಅಧಿವೇಶನದ ಕೊನೆಯ ದಿನ.ಫೈನಾನ್ಸ್ ಬಿಲ್ ಪಾಸ್ ಆಗದೇ ಇದ್ದಲ್ಲಿ ರಾಜ್ಯದ ಹಣಕಾಸು ವ್ಯವಸ್ಥೆ ನಿಂತು ಹೋಗುತ್ತೆ. ಫೈನಾನ್ಸ್ ಬಿಲ್ ಬರೋವಾಗ ಗದ್ದಲ ಮಾಡೋದು ಅವರ ಉದ್ದೇಶವಾಗಿತ್ತು. ಅಮಾನತು ಮಾಡಿದ್ರೆ ಕೊನೆಯ ದಿನ ಅಲ್ವಾ ಅಂತ ಮಾಡಿದ್ರು, ಆದರೆ ನಾನು‌ ಸ್ಪೀಕರ್ ಪವರ್ ಬಳಸಿ ಆರು ತಿಂಗಳು ಮಾಡಿದ್ದಾನೆ. ತಪ್ಪು ಮಾಡಿದವರಿಗೆ ಅವರ ತಪ್ಪು ಅರ್ಥ ಆಗಬೇಕು ಎಂದರು.

ರಾಜ್ಯದಲ್ಲಿ ಸದನಕ್ಕಿಂತ ದೊಡ್ಡ ಸಂವಿಧಾನದ ಸಂಸ್ಥೆ ಯಾವುದೂ ಇಲ್ಲ. ಸದನದಲ್ಲಿ ಅಧ್ಯಕ್ಷರ ಪೀಠಕ್ಕಿಂದ ಯಾವುದೂ ದೊಡ್ಡದಲ್ಲ. ಹಿಂದಿನ ಸ್ಪೀಕರ್ ಗಳು ಕಠಿಣ ಕ್ರಮ ಕೈಗೊಳ್ಳದ ಕಾರಣ ಹೀಗಾಗಿದೆ. ಅವರಿಗೆ ಧೈರ್ಯ ಇರಲಿಲ್ಲ, ನನಗೆ ಧೈರ್ಯ ಇದ್ದ ಕಾರಣ ಮಾಡಿದೆ. ಮಾಡದೇ ಇದ್ದರೆ ನಾಳೆ ಬಂದು ಸ್ಪೀಕರ್ ಸೀಟ್ ನಲ್ಲಿ ಕೂರ್ತಾರೆ, ನಾನು ಫೈನಾನ್ಸ್ ಬಿಲ್ ಪಾಸ್ ಆಗಲಿ ಅಂತ ತಾಳ್ಮೆಯಿಂದ ಇದ್ದೆ ಎಂದರು.

ನಾನು ಸಿಎಂ ಆಗಲೀ ಯಾರದ್ದೇ ಒತ್ತಡದಿಂದ ಮಾಡಿಲ್ಲ, ಇದು ಸ್ಪೀಕರ್ ನಿರ್ಧಾರ. ಮುಂದೆಯೂ ಮುಂದುವರೆಸಿದ್ರೆ ಅವರನ್ನ ಸದನದಿಂದ ವಜಾ ಮಾಡ್ತೇವೆ. ಸ್ಪೀಕರ್ ಕುರ್ಚಿಗೆ ಅವಮಾನ ಮಾಡುವಾಗ ಸುಮ್ಮನೆ ಕೂರಲು‌ ಆಗಲ್ಲ. ಆರು ತಿಂಗಳಿನಲ್ಲಿ ಸರಿ ಆಗದೇ ಇದ್ದರೆ ಒಂದು ವರ್ಷ ಅಮಾನತು ಮಾಡ್ತೇನೆ. ಸ್ಪೀಕರ್ ಸುಪ್ರೀಂ, ಪಕ್ಷಾಂತರ ಮಾಡೋದರಿದ್ರೆ ನಾನು ಕಾಯದೇ ಅನರ್ಹ ಮಾಡ್ತಿದ್ದೆ ಎಂದರು.

ನಮ್ಮ ಆಕ್ಟ್ ಗಟ್ಟಿಯಾಗಿದೆ, ಅದನ್ನು ನಾವು ಬಳಸಿದ್ದರೆ ಅದು ವೀಕ್ ಆಗುತ್ತೆ, ರಾಜಣ್ಣ ಆರೋಪದ ಮೇಲೆ ಚರ್ಚೆ ಮಾಡಿದಾಗ ಯತ್ನಾಳ್ ಅನುಮತಿ ಕೇಳಿದ್ದರು. ಆಗಲೂ ಅನುಮತಿ ಕೊಟ್ಟು ಚರ್ಚೆಗೆ ಅವಕಾಶ ಕೊಡಲಾಗಿದೆ. ಗೃಹ ಸಚಿವರು ಕೂಡ ಉತ್ತರ ಕೊಟ್ಟಿದ್ದಾರೆ, ಉನ್ನತ ತನಿಖೆಗೂ ಆದೇಶ ಮಾಡಿದ್ದಾರೆ. ಆಗ ಎಲ್ಲಾ ಪಕ್ಷದವರು ಒಪ್ಪಿ ಸುಮ್ಮನೆ ಕೂತುಕೊಂಡರು. ಆದರೆ ಮರುದಿನ ಸಿಎಂ ಬಜೆಟ್ ಭಾಷಣ ಮಾಡುವಾಗ ಮತ್ತೆ ಚರ್ಚೆ ಮಾಡಿದ್ರು ಎಂದರು.

ಆಗಲೂ ಸಿಎಂ ಉತ್ತರ ಕೊಟ್ಟರು, ಇಡೀ ಸದನ ಗಂಭೀರವಾಗಿ ತೆಗೆದುಕೊಂಡಿದೆ ಅಂದರು, ಗೃಹ ಸಚಿವರು ಕೂಡ ಉನ್ನತ ಮಟ್ಟದ ತನಿಖೆ ಮಾಡ್ತೀನಿ ಅಂದರು, ಆಗ ಮತ್ತೆ ಗಲಾಟೆ ಮಾಡೋದು, ಗೊಂದಲ ನಿರ್ಮಿಸೋದು ಸರಿಯಲ್ಲ. ಫೈನಾನ್ಸ್ ಬಿಲ್ ಗಿಂದ ಇದು ದೊಡ್ಡದಾ? ಈ ಬಗ್ಗೆ ಗೊತ್ತಿಲ್ಬಾ?, ಸಿಎಂ ಸಮಿತಿ ಮಾಡಿ ಎಲ್ಲರ ಸಲಹೆ ಪಡೀತೀನಿ ಅಂದಾಗಲೂ ಗಲಾಟೆ ಯಾಕೆ?. ಇದನ್ನೆಲ್ಲಾ ನಾನು ಸಭಾಧ್ಯಕ್ಚ ಸ್ಥಾನದಲ್ಲಿ ಕೂತು ಸಹಿಸಲು ಸಾಧ್ಯವಾ?. ಯು.ಟಿ.ಖಾದರ್ ಎಲ್ಲವನ್ನೂ ಸಹಿಸ್ತಾರೆ, ಅದರೆ ಸ್ಪೀಕರ್ ಪೀಠ ಸಹಿಸಲ್ಲ. ಅವರೆಲ್ಲಾ ನಮ್ಮ ಮಿತ್ರರೇ ಆದರೂ ಕ್ರಮ ಕೈಗೊಂಡಿದ್ದೇನೆ ಸ್ಪೀಕರ್ ಪೀಠದ ಮೇಲೆ ಬಂದವರ ಮೇಲಷ್ಡೇ ಕ್ರಮ ಕೈಗೊಳ್ಳಲಾಗಿದೆ. ಈ ಅಮಾನತಿನ ಕ್ರಮದ ಬಳಿಕ ರಾಜ್ಯದ ಬಗ್ಗೆ ಜನರಿಗೆ ಗೌರವ ಬಂದಿದೆ ಎಂದರು.