ಮಂಗಳೂರು : ಸ್ಟಿಕ್ಕರ್ ಅಂಟಿಸುವ ಬಗ್ಗೆ ಮಾಧ್ಯಮದವರೇ ನಿಮಗೆ ಗೊತ್ತಿತ್ತಾ? ಪ್ರಶ್ನಿಸಿದ ಕಾಮತ್, ಜನರಿಗೆ ಮಾಹಿತಿ ನೀಡದೆ ಎಲ್ಲರ ಮನೆಗೆ ಸ್ಟಿಕ್ಕರ್ ಅಂಟಿಸುವ ಅಧಿಕಾರ ಕೊಟ್ಟದು ಯಾರು? ಗಣತಿಗೆ ಬರುವ ಮುಂಚೆ ಜನರು ಯಾವ ಯಾವ ದಾಖಲೆಗಳನ್ನು ರೆಡಿ ಮಾಡಿಟ್ಟುಕೊಳ್ಳಬೇಕು ಎಂದು ಮೊದಲೇ ಮಾಹಿತಿ ನೀಡಬೇಕು ಎಂದು ನಿಮಗನಿಸಲಿಲ್ಲವೇ? ಎಂದು ಅವರು ಪ್ರಶ್ನಿಸಿದರು.
ನವರಾತ್ರಿ ಹಬ್ಬದಂದೇ ಜನಗಣತಿ ಮಾಡಿದ್ದಾರೆ. ಈ ವೇಳೆ ಕೆಲವರು ರಜೆಯಲ್ಲಿ ಪ್ರವಾಸಕ್ಕೆ ಹೋಗುತ್ತಾರೆ. ಸರ್ಕಾರ ಮೂರ್ಖರ ರೀತಿ ವರ್ತಿಸಿದೆ. ಕ್ರಿಶ್ಚಿಯನ್, ಮುಸ್ಲಿಮರಿಗೆ ಪೂರ್ಣ ಒಂದೇ ಜಾತಿ ಸೂಚಿಸಲು ಹೇಳಿದ್ದಾರಲ್ವಾ? ಹಾಗಾದರೆ ಕ್ರೈಸ್ತ, ಮುಸ್ಲಿಮರಲ್ಲಿ ಜಾತಿನ ಇಲ್ವಾ? ಕ್ರಿಶ್ಚಿಯನ್ ಬಂಟ, ಕ್ರಿಶ್ಚಿಯನ್ ಬ್ರಾಹ್ಮಣ ಹೀಗೆ ಜಾತಿಗಳಲ್ಲಿ ಗೊಂದಲ ಮಾಡಿದ್ದಾರೆ ಎಂದು ಕಾಮತ್ ಆರೋಪಿಸಿದರು.
ಜಿಲ್ಲೆಯಲ್ಲಿ ಎಷ್ಟು ಮಂದಿ ಆಶಾ ಕಾರ್ಯಕರ್ತರಿದ್ದಾರೆ ಎಂದು ಗೊತ್ತಿದೆಯಾ? ಒಂದು ಮನೆಯನ್ನು ಗಣತಿ ಮಾಡಲು ಸುಮಾರು ಒಂದೂವರೆ ಗಂಟೆ ಬೇಕಾದರೆ ಹನ್ನೆರಡು ದಿನಗಳಲ್ಲಿ ಜಾತಿ ಗಣತಿ ಮುಗಿಸಲು ಸಾಧ್ಯವಾ? ಪರಿಶಿಷ್ಠ ಜಾತಿಯವರ ಮನೆಗೆ ಹಿಂದುಳಿದವರ ಸ್ಟಿಕ್ಕರ್ ಅಂಟಿಸಿದ್ದಾರೆ. ಹೀಗೆ ಜಾತಿಗಣತಿ ಗೊಂದಲದಿಂದ ಕೂಡಿದೆ ಎಂದರು.
ಬಂಟವರ ಯಾನೆ ನಾಡವರ ಸಮುದಾಯದಲ್ಲಿ ಬಂಟ ಜಾತಿಯನ್ನು ಕಾಂಗ್ರೆಸ್ ತುಂಡು ಮಾಡಿತು. ಜಾತಿಯ ಕಾಲಂನಲ್ಲಿ ಐದು ಪದ ಮಾತ್ರ ಬಳಸಿಕ್ಕೆ ಅವಕಾಶ ಇದೆ.ಕೆಲವು ಜಾತಿಗಳು ಐದು ಅಕ್ಷರಗಳಿಂತ ಜಾಸ್ತಿ ಇದ್ದು ಅದನ್ನು ‘ನನ್ ಆಫ್ ಅದರ್ಸ್’ ಕಾಲಂನಲ್ಲಿ ಬರೆಯಲು ಸೂಚಿಸಿದ್ದಾರೆ. ಜಾತಿಯನ್ನು ಕಿತ್ತು ಹಾಕಿದ್ದಕ್ಕಾಗಿ ಆದಿದ್ರಾವಿಡರಿ ಪ್ರತಿಭಟನೆ ಮಾಡಿ, ತಾವು ಏನು ಮೆನ್ಹನ್ ಮಾಡೋಕು ಅಂತಾ ಗೊತ್ತಾಗ್ತಾ ಇಲ್ಲ ಎಂದು ಗೊಂದಲ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಹಲವಾರು ಗೊಂದಲಗಳಿವೆ ಎಂದರು.
ಆಶಾ ಕಾರ್ಯಕರ್ತರನ್ನು ಒತ್ತಾಯಪೂರ್ವಕವಾಗಿ ಬಳಸ್ತಾ ಇದ್ದಾರೆ. ಗ್ರಾಮಾಂತರದಲ್ಲಿ 5 ಸಾವಿರ, ನಗರದಲ್ಲಿ 10 ಸಾವಿರ ಸಂಬಳ ಕೊಡದೇ ಇದ್ದರೆ ಕೆಲಸ ಮಾಡುವುದಿಲ್ಲ ಎಂದು ಆಶಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂ ಧಾರ್ಮಿಕ ಹಬ್ಬದಂದೇ ಜಾತಿ ಗಣತಿ ಮಾಡಿ ಹಿಂದೂ ಸಮಾಜ ಒಡೆಯಲು ನಿಮ್ಮ ಹಿಡನ್ ಅಜೆಂಡಾ ಜಾರಿ ಮಾಡುತ್ತಿದ್ದೀರಿ. ಕೆಲವರು ಈ ಸ್ಟಿಕ್ಕರ್ ಮಾಹಿತಿ ಇಲ್ಲದೆ, ಭಯದಿಂದ ಹರಿದು ಬಿಸಾಡಿದ್ದಾರೆ ಎಂದರು.ಎಂದು ಶಾಸಕ ವೇದವ್ಯಾಸ್ ಕಾಮತ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

