ಮಂಗಳೂರು: ಮೀನುಗಾರಿಕಾ ಬಂದರಿಗೆ ಮುಖ್ಯಮಂತ್ರಿ ಡಿ ಕೆ‌ ಶಿವಕುಮಾರ್ ಭೇಟಿ ನೀಡಿದರು. ಈ ಹಿನ್ನಲೆ ಬಂದರು ಮೀನು ವ್ಯಾಪಾರವನ್ನು ಪೊಲೀಸ್ ಇಲಾಖೆ ಬಂದ್ ಮಾಡಿದ್ದರು. ಪೊಲೀಸ್ ಇಲಾಖೆ ವಿರುದ್ಧ ಸಿಎಂ ಡಿ ಕೆ ಶಿ ಗರಂ ಆದರು.

ನಾನು ಮೀನುಗಾರರ ಜೊತೆ ಅವರ ಕಷ್ಟ ಕೇಳಲು ಬಂದಿರುವುದು. ಅವರನ್ನ ಬಂದ್ ಮಾಡಲು ಹೇಳಿದ್ದು ಯಾರೂ. ಈ ಬಗ್ಗೆ ನಾನು ಕ್ರಮ ಕೈಗೊಳ್ಳುತ್ತೇನೆ. ಮಂಗಳೂರು ಮೀನುಗಾರಿಕಾ ಬಂದರ್ ನಲ್ಲಿ ಡಿ ಸಿ , ಪೊಲೀಸ್ ವಿರುದ್ಧ ಮುಖ್ಯಮಂತ್ರಿ ಗರಂ ಆದರು.

ಪೊಲೀಸ್ ಇಲಾಖೆ ಹಾಗು ಅಧಿಕಾರಿಗಳಿಗೆ ಡಿಕೆಶಿ ಕ್ಲಾಸ್ ತೆಗೆದುಕೊಂಡರು. ನಿಮ್ಮ ಸೆಕ್ಯೂರಿಟಿ ಯಾವನಿಗೆ ಬೇಕು?. ಮಂಗಳೂರು ಡಿಸಿಪಿ ವಿರುದ್ಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗರಂ ಆದರು. ಇಂದು ಮೀನುಗಾರರ ಸಮಸ್ಯೆ, ವ್ಯಾಪಾರ ವೀಕ್ಷಿಸಲು ಡಿಕೆಶಿ ಧಕ್ಕೆ ಬಂದರಿಗೆ ಬಂದಿದ್ದರು.

ಆದರೆ ಭದ್ರತೆಯ ಕಾರಣಕ್ಕೆ ಬಂದರು ವ್ಯಾಪಾರವನ್ನು ಪೊಲೀಸ್ ಇಲಾಖೆ ಬಂದ್ ಮಾಡಿಸಿದ್ದರು. ಯಾರು ವ್ಯಾಪಾರ ಬಂದ್ ಮಾಡಿಸಿದ್ರೋ ಅವರನ್ನ ಸಸ್ಪೆಂಡ್ ಮಾಡುತ್ತೇನೆ ಎಂದರು.