ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಮ್ಮೇಳನದ  ಸಮಿತಿ ವತಿಯಿಂದ ನಡೆಯುವ ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಮ್ಮೇಳನ 2025 “ವರ್ಣಯಾನ”  9 ನವೆಂಬರ್ 2025 ರಂದು ಮಂಗಳೂರಿನ ಸಂತ ಅಲೋಸಿಸ್ ಪ್ರೌಢಶಾಲೆ ಕೋಡಿಯಾಲಬೈಲು ಮಂಗಳೂರು ಇಲ್ಲಿನ  ಕಲಾವಿದ ಮೊಸ್ಕೇನಿ ವೇದಿಕೆಯಲ್ಲಿ ವಿವಿಧ ಚಟುವಟಿಕೆಗಳೊಂದಿಗೆ ಪೂರ್ಣ ದಿನ ನಡೆಯಲಿದೆ.

ಜಿಲ್ಲೆಯ ಸರಕಾರಿ,ಅನುದಾನಿತ,ಅನುದಾನ ರಹಿತ ಚಿತ್ರಕಲಾ ಶಿಕ್ಷಕರನ್ನು ಒಟ್ಟು ಸೇರಿಸುವ ಉದ್ದೇಶ ಮತ್ತು  ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಚಿತ್ರಕಲಾ ಶಿಕ್ಷಣದ ಪ್ರಾಮುಖ್ಯತೆಯನ್ನು ಸಮಾಜದ ಗಮನಕ್ಕೆ ತರುವುದು ಹಾಗೂ ಚಿತ್ರಕಲಾ ಶಿಕ್ಷಕರ ಹಲವು ಸಮಸ್ಯೆಗಳನ್ನು ಜನಪ್ರತಿನಿಧಿಗಳಿಗೆ ಹಾಗೂ ಇಲಾಖೆಗೆ ತಲುಪಿಸುವ  ಉದ್ದೇಶವನ್ನು ಇಟ್ಟುಕೊಂಡು ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಸಮ್ಮೇಳನವು ಪೂರ್ವಾಹ್ನ ಒಂಭತ್ತು ಮೂವತ್ತಕ್ಕೆ ಉದ್ಘಾಟನೆ ಗೊಳ್ಳಲಿದೆ. ರೆ. ಫಾ. ಮೇಲ್ವಿನ್ ಪಿಂಟೋ .ಎಸ್ .ಜೆ, ರೆಕ್ಟರ್ ಸಂತ ಅಲೋಷಿಯಸ್ ಶಿಕ್ಷಣ ಸಂಸ್ಥೆಗಳು ಮಂಗಳೂರು ಇವರು ನೆರವೇರಿಸಲಿರುವರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಐವನ್ ಡಿಸೋಜಾ, ಶಾಸಕರು, ಕರ್ನಾಟಕ ವಿಧಾನ ಪರಿಷತ್, ಸದಾನಂದ ಪೂಂಜ, ಉಪನಿರ್ದೇಶಕರು, ದ.ಕ.ಜಿಲ್ಲಾ ಶಿಕ್ಷಕ ಶಿಕ್ಷಣ ತರಬೇತಿ ಸಂಸ್ಥೆ ಮಂಗಳೂರು,

ಪದ್ಮರಾಜ್ ಆರ್ ಪೂಜಾರಿ ನಿರ್ದೇಶಕರು ಗುರು ಬೆಳದಿಂಗಳು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ರೆ.ಫಾ. ಜಾನ್ಸನ್ ಪಿಂಟೋ ಎಸ್.ಜೆ., ಮುಖ್ಯೋಪಾಧ್ಯಾಯರು, ಸಂತ ಅಲೋಸಿಸ್ ಪ್ರೌಢಶಾಲೆ ಮಂಗಳೂರು ಮತ್ತಿತರರು ಭಾಗವಹಿಸಲಿರುವರು. ಬೆಳಿಗ್ಗೆ 11 ಗಂಟೆಯಿಂದ ಶಿಕ್ಷಣದಲ್ಲಿ ಚಿತ್ರಕಲೆಯ ಮಹತ್ವ ಮತ್ತು ಪ್ರಸ್ತುತ ಸ್ಥಿತಿಗತಿ ಕುರಿತು ಸಂವಾದ ನಡೆಯಲಿದ್ದುಈ ವಿಷಯದ ಕುರಿತು ಖ್ಯಾತ ಲೇಖಕರು ಹಾಗೂ ಚಿಂತಕರಾದ ಶ್ರೀ ಅರವಿಂದ ಚೊಕ್ಕಾಡಿ  ವಿಷಯ ಮಂಡನೆ ಮಾಡಲಿರುವರು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಕಲಾವಿದ ಹಾಗೂ ಪರಿಸರವಾದಿ  ದಿನೇಶ್ ಹೊಳ್ಳ ವಹಿಸಿಕೊಳ್ಳಲಿರುವರು.

ಸಮಾರೋಪ ಸಮಾರಂಭ ಸಂಜೆ 3 ರಿಂದ ನಡೆಯಲಿದ್ದು ಕರ್ನಾಟಕ ವಿಧಾನಸಭೆ ಸಭಾಪತಿಗಳಾದ ಯು ಟಿ ಖಾದರ್ ಫರೀದ್, ಮಂಗಳೂರು ದಕ್ಷಿಣದ ಶಾಸಕರಾದ  ವೇದವ್ಯಾಸ ಕಾಮತ್, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಎಸ್ ಎಲ್ ಭೋಜೇಗೌಡ, ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ  ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ. ಆವಟಿ,

ಎಸ್ ಜಿ ಶಶಿಧರ್, ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮೋಹನ್ ಕುಮಾರ್, ಪ್ರಾಚಾರ್ಯರು, ಮಹಾಲಸಾ ಚಿತ್ರಕಲಾ ಮಹಾವಿದ್ಯಾಲಯ ಮಂಗಳೂರು ಶ್ರೀ ಕೋಟಿ ಪ್ರಸಾದ್ ಆಳ್ವ, ಸ್ಥಾಪಕರು, ಪ್ರಸಾದ್ ಆರ್ಟ್ ಗ್ಯಾಲರಿ ಮಂಗಳೂರು ಮುಂತಾದ ಗಣ್ಯರು ಭಾಗವಹಿಸಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲಕೃಷ್ಣ ಶೆಟ್ಟಿ ಖಂಡಿಗ, ಅಧ್ಯಕ್ಷರು, ದ.ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಮಂಗಳೂರು ಇವರು ವಹಿಸಲಿರುವರು.

ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಬೃಹತ್ ಚಿತ್ರಕಲಾ ಸ್ಪರ್ಧೆ ಮತ್ತು ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಚಿತ್ರಕಲೆ, ಕ್ರಾಫ್ಟ್ ,ಕ್ಲೇ ಮಾಡಲಿಂಗ್ ಇವುಗಳ ಉಚಿತ ಕಾರ್ಯಗಾರಗಳು ನಡೆಯಲಿದೆ.

ಜೊತೆಗೆ ಕಾವ್ಯ ಕುಂಚ, ಚಿತ್ರಕಲಾ ಪ್ರಾತ್ಯಕ್ಷಿಕೆ ಹಾಗೂ ಚಿತ್ರ ಶಿಕ್ಷಕರಿಂದ ಚಿತ್ರಕಲಾ ಪ್ರದರ್ಶನ, ಸಂಘದ ಪೂರ್ವ ಅಧ್ಯಕ್ಷರುಗಳಿಗೆ, ನಿವೃತ ಶಿಕ್ಷಕರಿಗೆ, ಪ್ರತಿಭಾನ್ವಿತ ಶಿಕ್ಷಕರಿಗೆ  ಸನ್ಮಾನ,ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ  ಬಾಲಕೃಷ್ಣ ಶೆಟ್ಟಿ ಖಂಡಿಗ, ಸಮ್ಮೇಳನ ಸಮಿತಿಯ ಕಾರ್ಯದರ್ಶಿಗಳಾದ ಬಿ. ಎಂ.ರಫೀಕ್ ತುಂಬೆ, ಜಾನ್ ಚಂದ್ರನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಮಂಜುನಾಥ್ ನಾಯ್ಕ್, ಖಜಾಂಜಿ ದಿನೇಶ್ ಶೆಟ್ಟಿಗಾರ್ ಮತ್ತು ಮಂಗಳೂರು ದಕ್ಷಿಣ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷೆ ರಾಜೇಶ್ವರಿ ಉಪಸ್ಥಿತರಿದ್ದರು.