ಮಂಗಳೂರು: ದಿಗಂತ್ ಪತ್ತೆಗೆ ಆಗ್ರಹಿಸಿ ಪ್ರತಿಭಟಿಸಿದ ಭಜರಂಗದಳ ಮುಖಂಡನಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಸಾಮಾಜಿಕ ತಾಣಗಳ ಕೆಲ ಪೇಜ್ ಗಳಲ್ಲಿ ಭಜರಂಗದಳ ಮುಖಂಡನಿಗೆ ಕೊಲೆ ಥ್ರೆಟ್ ಹಾಕಲಾಗಿದೆ. ಭಜರಂಗದಳ ಪುತ್ತೂರು ವಿಭಾಗ ಸಂಯೋಜಕ ಭರತ್ ಕುಮ್ಡೇಲ್ ಹತ್ಯೆ ಬೆದರಿಕೆ ಕೇಳಿಬಂದಿದೆ.
BEARY_ROYAL_NAWAB, ಬ್ಯಾರಿ ಟ್ರೋಲರ್, ಮಂಗಳೂರು ಕಿಂಗ್ ಸೇರಿ ಕೆಲ ಪೇಜ್ ಗಳಲ್ಲಿ ಪೋಸ್ಟ್ ಹಾಕಲಾಗಿದೆ. ಮಾ.1ರಂದು ದಿಗಂತ್ ಪತ್ತೆಗಾಗಿ ಭಜರಂಗದಳ ಮುಖಂಡ ಭರತ್ ನೇತೃತ್ವದಲ್ಲಿ ಫರಂಗೀಪೇಟೆ ಬಂದ್ ನಡೆಸಲಾಗಿತ್ತು. ಈ ವೇಳೆ ನಾಪತ್ತೆ ಹಿಂದೆ ಅನ್ಯಮತೀಯರ ಹಾಗೂ ಗಾಂಜಾ ಗ್ಯಾಂಗ್ ಕೈವಾಡ ಎಂದು ಭರತ್ ಕುಮ್ಡೇಲು ಆರೋಪಿಸಿದ್ದರು.
ಆದರೆ ಪರೀಕ್ಷೆ ಭಯದಿಂದ ದಿಗಂತ್ ನಾಪತ್ತೆಯಾಗಿ ಸದ್ಯ ಪತ್ತೆಯಾಗಿದ್ದಾನೆ. ದಿಗಂತ್ ಪತ್ತೆ ಬೆನ್ನಲ್ಲೇ ಕೆಲ ಅಪರಿಚಿತ ಪೇಜ್ ಗಳಲ್ಲಿ ಭರತ್ ಕುಮ್ಡೇಲುಗೆ ಬೆದರಿಕೆ ಬಂದಿದೆ. 2017ರಲ್ಲಿ ನಡೆದ ಎಸ್ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆ ಆರೋಪಿಯೂ ಆಗಿರೋ ಭರತ್, ‘ಭರತ್ ಕುಮ್ಮೇಲು ರಕ್ತ ಈ ಭೂಮಿಗೆ ಹರಿಸದೆ ನಮಗೆ ಸಮಾಧಾನವಿಲ್ಲ’ ಎಂದು ಪೋಸ್ಟ್ ಹಾಕಲಾಗಿದೆ.

‘ಶಾಂತಿಯುತವಾದ ಫರಂಗಿಪೇಟೆಯಲ್ಲಿ ಕೋಮುಗಲಭೆ ನಡೆಸಲು ಸಂಘ ಪರಿವಾರದ ಅಜಂಡವಿತ್ತು, ಅದು ನಡೆಯಲಿಲ್ಲ, ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ ಕೋಮು ಬಣ್ಣ ಬಳಿಯಲು ನೋಡಿದರು. ಆದರೆ ಪೊಲೀಸ್ ಇಲಾಖೆಯ ಕಠಿಣ ಶ್ರಮದಿಂದ ಚಾನ್ಸ್ ಸಿಕ್ಕಿಲ್ಲ.
ದಿಗಂತ್ ಪತ್ತೆಹಚ್ಚಿದ ಪೊಲೀಸ್ ಇಲಾಖೆಗೆ ಅಭಿನಂದನೆಗಳು. ಪೊಲೀಸರಿಗೆ ಮನವಿ, ಈ ಸೂಳೇಮಗ ಮಗ ಭರತ್ ಕುಮ್ಮೇಲು ಮುಸಲ್ಮಾನರ ತಲೆಗೆ ಕಟ್ಟುವ ಹುನ್ನಾರವಿತ್ತು. ಇವನು ಇನ್ನು ಎಲ್ಲಿಯಾದರೂ ಮುಸಲ್ಮಾನರ ಹೆಸರು ಎತ್ತಿದರೆ ಅದೇ ಪ್ರತಿಭಟನೆಗೆ ದಾಳಿ ಮಾಡುತ್ತೇವೆ.
ಮತ್ತೆ ಇಲ್ಲಿ ಕೋಮು ಗಲಭೆ ಉಂಟಾದರೆ ನಾವು ಜವಾಬ್ದಾರರಲ್ಲ ಎಚ್ಚರಿಕೆ, ಇವನ ಬಗ್ಗೆ ಕ್ರಮತೆಗಿದುಕೊಳ್ಳಿ. ನಮ್ಮ ಸಹೋದರ ಶಾಹಿದ್ ಅಶ್ರಫ್ ಕಲಾಯಿಯನ್ನು ಮರೆತಿಲ್ಲ, ಪ್ರತಿರೋಧ ಅಪರಾಧವಲ್ಲ ಎಂದು ಪೋಸ್ಟ್ ಹಾಕಿದ್ದಾರೆ. ಬಂಟ್ವಾಳದಲ್ಲಿ ಮತ್ತೆ ಸಂಘರ್ಷದ ಸೋಶಿಯಲ್ ಮೀಡಿಯಾ ವಾರ್ ಗೆ ದಿಗಂತ್ ನಾಪತ್ತೆ ಕೇಸ್ ಕಾರಣವಾಗಿದೆ.

