ಮಂಗಳೂರು : ನಗರದ ಕಾಂಗ್ರೆಸ್ ನಾಯಕರಿಗೆ ಕಗ್ಗಂಟಾದ ಕಲ್ಲು ತೂರಾಟ ಪ್ರಕರಣ ಇದೀಗ ತೀವ್ರ ರೂಪ ಪಡೆದುಕೊಳ್ಳುತ್ತಿದೆ. ಬಸ್‌ಗೆ ಕಲ್ಲು ತೂರಾಟ ನಡೆಸಿದ ಮನಪಾ ಪಾಲಿಕೆ ಸದಸ್ಯನನ್ನು ವಜಾಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಆಗಸ್ಟ್ 19ರಂದು ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಕಿಶೋರ್ ಶೆಟ್ಟಿ ಬಸ್‌ಗೆ ಕಲ್ಲು ಬಿಸಾಡಿದ್ದು ಇದೀಗ ಕಾಂಗ್ರೆಸ್ಸಿಗರ ಕೋಪಕ್ಕೆ ಕಾರಣವಾಗಿದ್ದಾರೆ. ಮಂಗಳೂರು ಮಹಾ ನಗರ ಪಾಲಿಕೆಯ ಕಾಂಗ್ರೆಸ್‌ನ ನಾಮನಿರ್ದೇಶಿತ ಸದಸ್ಯ ಆಗಿರುವ ಕಿಶೋರ್ ಶೆಟ್ಟಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಬಸ್‌ಗೆ ಕಲ್ಲು ತೂರಾಟ ನಡೆಸಿದ್ದರು . ಇದೀಗ ಅವರ ಮನಪಾ ಸದಸ್ಯತ್ವ ವಜಾಗೊಳಿಸುವಂತೆ ಮನಪಾ ಸಭೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಇನ್ನು ಈ ಬಗ್ಗೆ ಮಾತನಾಡಿದ ಮೇಯರ್ ಕಲ್ಲು ತೂರಾಟ ನಡೆಸಿದ ಸದಸ್ಯನನ್ನು ವಜಾಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವಂತೆ ತಿಳಿಸಿದ್ದಾರೆ.

