ಮಂಗಳೂರು : ಯುನಿಸೆಕ್ಸ್ ಬ್ಯೂಟಿ ಪಾರ್ಲರ್, ಹೆಲ್ತ್ಕೇರ್, ಆಯುರ್ವೇದಿಕ್ ಸೆಂಟರ್, ಮಸಾಜ್ ಪಾರ್ಲರ್ ಹೆಸರಿನಲ್ಲಿ ನಡೆಯುವ ಅನೈತಿಕ ದಂಧೆಗೆ ಕಡಿವಾಣ ಹಾಕಲು ನಿಯಮ ರೂಪಿಸುವ ಜತೆಗೆ, ಕೇರಳ ಮಾದರಿ ಕಾನೂನು ಜಾರಿಗೊಳಿಸಬೇಕು ಎಂದು ವಕೀಲ ಮನೋರಾಜ್ ರಾಜೀವ ಆಗ್ರಹಿಸಿದರು.
ರಾಜ್ಯದ ಸಿಎಂ, ಕಾನೂನು ಸಚಿವರು ಮತ್ತು ಪ್ರತಿಪಕ್ಷದ ನಾಯಕರಿಗೆ ಈ ವಿಷಯ ಕುರಿತು ಡಿಸಿ ಮೂಲಕ ಮನವಿ ಸಲ್ಲಿಸುತ್ತಿದ್ದು, ಜನಪ್ರತಿನಿಧಿಗಳು ಅಧಿ ವೇಶನದಲ್ಲಿ ಚರ್ಚಿಸಿ ಸೂಕ್ತ ಕಾನೂನು ಜಾರಿಗೆ ತರಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಆಯುರ್ವೇದಿಕ್ ಸೆಂಟರ್ಗಳಲ್ಲೂ ಯಾವ ರೀತಿಯಲ್ಲಿ ಮಸಾಜ್ ಮಾಡಬೇಕು, ಅನುಸರಿಸಬೇಕಾದ ನಿಯಮಗಳು, ವ್ಯವಸ್ಥೆ ಬಗ್ಗೆ ಕೇರಳ ಹೊರತುಪಡಿಸಿ, ದೇಶದ ಬೇರೆಲ್ಲೂ ಕಾನೂನು ಇಲ್ಲ. ಮಸಾಜ್ ಪಾರ್ಲ್ರಗಳ ಬಗ್ಗೆ ಎಲ್ಲೂ ಕಾನೂನು ಇಲ್ಲ. ಹಾಗಾಗಿ ಕೆಲವು ಯುನಿಸೆಕ್ಸ್ ಬ್ಯೂಟಿಪಾರ್ಲರ್ ಗಳಲ್ಲಿ ಯುವತಿಯರಿಂದ ಯುವಕರಿಗೆ ಸೇವೆ ಒದಗಿಸುವ ನೆಪದಲ್ಲಿ ಪೊಲೀಸರಿಂದ ದಾಳಿ ನಡೆಸಿ ತೊಂದರೆ ನೀಡುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದರು.
ಜಿಲ್ಲೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಅಗತ್ಯವಿದೆ. ಆದರೆ ಅದಕ್ಕೆ ಕನಿಷ್ಠ 40 ಎಕರೆ ಜಾಗ, 300 ಕೋಟಿ ರೂ. ಹಣದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯದ ಪರಿಮಿತಿಯೊಳಗೆ ಕೆಲವೊಂದು ರಿಟ್ ಪಿಟಿಶನ್ ಗಳ ನ್ಯಾಯದಾನಕ್ಕೆ ಜಿಲ್ಲಾ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಿಗೆ ಹೆಚ್ಚುವರಿ ಅಧಿಕಾರ ನೀಡಿದರೆ ಸಾಕಷ್ಟು ಪ್ರಕರಣಗಳನ್ನು ಜಿಲ್ಲಾ ನ್ಯಾಯಾಲಯದ ಮೂಲಕ ಬಗೆಹರಿಸಬಹುದಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕಾನೂನು ಸಚಿವರು, ಪ್ರತಿಪಕ್ಷದ ನಾಯಕರಿಗೆ ಮನವಿ ಸಲ್ಲಿಸುತ್ತಿರುವುದಾಗಿ ನ್ಯಾಯವಾದಿ ಮನೋರಾಜ್ ರಾಜೀವ ಹೇಳಿದರು.
ಯುವತಿಯರು, ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ನಿರುದ್ಯೋ ಸೃಷ್ಟಿಯಾಗುತ್ತಿದೆ. ಸಾಲ ಮಾಡಿ ಉದ್ಯಮ ಆರಂಭಿಸಿದವರು ಮರುಪಾವತಿಸಲಾಗದೆ, ಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಸೂಕ್ತ ಕಾನೂನು ರಚಿಸಿ, ಜಾರಿಗೆ ತರಬೇಕು ಎಂದು ಆ ಆಗ್ರಹಿಸಿದರು.ಕಿರಿಯ ವಕೀಲರಾದ ನಂದಿನಿ ಅಖಿಲ್, ರೋಶನಿ ಸ್ವರಭ್, ಶಿಶಿರ್ ಬಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

