ಮಂಗಳೂರು : ಒಂದು ತಿಂಗಳ ಒಳಗೆ ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಮಂಗಳೂರು ಜಿಲ್ಲೆ ಎಂದು ಬದಲಾಯಿಸುವ ನಿರ್ಧಾರ ಮಾಡುತ್ತೇವೆ. 15 ತಿಂಗಳು ರಾಜ್ಯದ 10-12 ಜಿಲ್ಲೆಗಳಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದೆ. ಅನೇಕ ಅಭಿವೃದ್ಧಿ ಕೆಲಸಗಳನ್ನ ತೆಗೆದುಕೊಂಡಿದ್ದೇವೆ. ಪ್ರವಾಸೋದ್ಯಮ ನೀತಿಯಲ್ಲಿ ಮಲೆನಾಡು ಮತ್ತು ಕರಾವಳಿ ಪ್ರದೇಶ ಒಳಗೊಂಡಂತೆ ಹೊಸ ಪ್ರವಾಸೋದ್ಯಮ ನೀತಿ ನಿರ್ಧಾರ ಮಾಡಿದ್ದೇವೆ ಎಂದರು.
ಮುಖ್ಯವಾಗಿ ಇದನ್ನ ಇನ್ಫ್ರಾಸ್ಟ್ರಕ್ಚರ್ ಯೋಜನೆಯಾಗಿ ರೂಪಿಸುತ್ತೇವೆ. ಫಿಶರೀಸ್, ಮ್ಯಾರಿನ್ , ಬ್ಲೂ ಎಕನಾಮಿಕ್ಸ್ ಯೂನಿವರ್ಸಿಟಿ 60 ಸೀಟ್ ನ್ನ 200ಕ್ಕೆ ಏರಿಸುತ್ತೇವೆ. ಕಿದ್ವಾಯಿ ಮತ್ತು ಜಯ ದೇವ ಆಸ್ಪತ್ರೆ ಮಾಡುತ್ತೇವೆ. ತುಳು ಭಾಷೆಯ ಸ್ಥಾನಮಾನದ ಬಗ್ಗೆ ಮೊದಲು ಧ್ವನಿ ಎತ್ತಿದ್ದು ಅಶೋಕ್ ಕುಮಾರ್ ರೈ. ಅಶೋಕ್ ರೈಗೆ ಭಾವನೆ ಇದ್ದಿದ್ದು ತುಳು ಭಾಷೆಯ ಗೌರವದ ಬಗ್ಗೆ. ಎಲ್ಲರಿಗೂ ಕೂಡ ನಾನು ಅಭಿನಂದಿಸುತ್ತೇನೆ ಎಂದರು.
ಲೈಟ್ ಹೌಸ್ ಅದರ ಸುತ್ತ ಪ್ರವಾಸ್ತೋ 60.34 ಕೋಟಿ ಅನುದಾನ ನೀಡಲಿದೆ. ಉತ್ತರ ಕನ್ನಡ ಜಿಲ್ಲೆಯ ಮಂಕಿ ಬಂದರ್ ನಲ್ಲಿ 6925 ಕೋಟಿ ಅನುದಾನ ನೀಡಲಿದೆ. ಉಡುಪಿ ಮಲ್ಪೆ, ಆಯಬದಲ್ಲಿ ಪಿಪಿ 179 ಕೋಟಿ ಅನುದಾನ, ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿ ಬಗ್ಗೆ ಇಂಡಿಯನ್ ನೇವೆ 250 ಕೋಟಿ ವೆಚ್ಚದಲ್ಲಿ ರನ್ವೇ ಆಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕೋಟೆಪುರ ಟು ಚರ್ವಾತುರ್ ಅನುದಾನ ನೀಡಲಿದೆ. ಮಂಗಳೂರು ಅತ್ರಾಡಿ ಮರವೂರು ಸೇತುವೆಗೆ 40 ಕೋಟಿ ಅನುದಾನ ನೀಡಲಿದೆ. ಕಟೀಲು ರಸ್ತೆಗೆ ೩೩ ಕೋಟಿ ಅನುದಾನ, ಮುಲ್ಕಿ ದಾಮಸ್ ಕಟ್ಟೆ ಯಲ್ಲಿ ಪಾಲಿಮಾರ್ ಕಟ್ಟೆ ಸೇತುವೆ 25 ಕೋಟಿ, ಬೆಳ್ತಂಗಡಿಯ ಕುವೆಟ್ಟು ಗ್ರಾಮದಲ್ಲಿ 5 ಕೋಟಿ ಅನುದಾನ ಕಾಂಗ್ರೆಸ್ ಭವನಕ್ಕೆ, ಕದ್ರಿಯಲ್ಲಿ ಮಂಗಳೂರು ಐ ನಿರ್ಮಾಣ ೫ ಎಕರೆ ಯಲ್ಲಿ ಆಗಲಿದೆ. ಪುತ್ತೂರು ಮೆಡಿಕಲ್ ಕಾಲೇಜ್ ಗೆ 425 ಕೋಟಿ ನೀಡಲಿದೆ.

