ಮಂಗಳೂರು : ಪ್ರೇಮಮಯಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮಶತಮಾನೋತ್ಸವದ ಮೂಲಾಧಾರವಾದ ‘ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ’ ಹೆಸರಿನ ರಥಯಾತ್ರೆ ದೇಶಾದ್ಯಂತ ಸಂಚರಿಸುತ್ತಿದೆ.
ಈ ಪವಿತ್ರ ಯಾತ್ರೆ ಸಂಕೇತಿಸುವ ದೈವಪ್ರೀತಿಯು ಕೇವಲ ಸಂದೇಶವಲ್ಲದೆ ಶ್ರೀ ಸತ್ಯಸಾಯಿ ಅವತಾರದ ಮೂಲತತ್ವ-ಎಲ್ಲ ಗಡಿಗಳನ್ನು ದಾಟಿ ಮಾನವೀಯತೆಯನ್ನು ಅದರ ಶುದ್ಧ ರೂಪದಲ್ಲಿ ಒಂದುಗೂಡಿಸುವ ಪ್ರೀತಿ, ಪ್ರೇಮಸ್ವರೂಪಿ ಭಗವಾನ್ ಬಾಬಾ ಅವರ ಜನ್ಮ ಶತಮಾನೋತ್ಸವದ ಕೇಂದ್ರ ಉಪಕ್ರಮಗಳಲ್ಲಿ ಒಂದಾಗಿ, ಈ ಯಾತ್ರೆ ಭಗವಾನ್ ಅವರ ಸಮಯಾತೀತ ಸಂದೇಶದ ಆಳವಾದ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರೇಮವೇ ಮೂಲ ಉಗಮ, ಪಥ ಹಾಗೂ ಗುರಿಯಾಗಿದೆ.
ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ‘ಪ್ರೇಮ ಪ್ರವಾಹಿನಿ’ ರಥವು ದೇಶಾದ್ಯಂತ 5 ವಿಭಾಗಗಳಾಗಿ ಸಂಚರಿಸುತ್ತಿದ್ದು, ದಕ್ಷಿಣ ಭಾರತದಲ್ಲಿ ಸಂಚರಿಸುವ ರಥ ಈಗಾಗಲೇ ತೆಲಂಗಾಣ ರಾಜ್ಯದ ಮೂಲಕ ಕರ್ನಾಟಕ ರಾಜ್ಯವನ್ನು ಪ್ರವೇಶಿಸಿದೆ. ರಾಜ್ಯದ ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಸಂಚರಿಸಿದ್ದು, ಮಾ.7ರಂದು ಗುಂಡ್ಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಲಿದ್ದು, ಮಾ.14ರಂದು ಉಡುಪಿ ಜಿಲ್ಲೆಗೆ ತೆರಳಲಿದೆ.
ಗುಂಡ್ಯದಲ್ಲಿ ‘ಪ್ರೇಮ ಪ್ರವಾಹಿನಿ’ ರಥಕ್ಕೆ ಸ್ವಾಗತ
ಮಾ.7ರಂದು ಬೆಳಗ್ಗೆ 10 ಗಂಟೆಗೆ ಗುಂಡ್ಯದಲ್ಲಿ ಅಪ್ರೇಮ ಪ್ರವಾಹಿನಿದ ರಥವನ್ನು ಸ್ವಾಗತಿಸಿ, ಚೊಕ್ಕಾಡಿ, ಸುಳ್ಯ, ಬೆಳ್ತಂಗಡಿ, ಶ್ರೀಕ್ಷೇತ್ರ ಧರ್ಮಸ್ಥಳ, ಪುತ್ತೂರು, ಬಂಟ್ವಾಳ, ವಿಟ್ಲ, ಅಳಿಕೆ ಶ್ರೀ ಸತ್ಯಸಾಯಿ ವಿಹಾರ, ಕಾಸರಗೋಡಿನ ಬಾಯಾರು ಪ್ರಶಾಂತಿ ವಿದ್ಯಾಕೇಂದ್ರ, ಕಾಸರಗೋಡು, ಕಿಳಿಂಗಾರು ಶ್ರೀ ಸಾಯಿಮಂದಿರ, ದೈಗೋಳಿ ಶ್ರೀ ಸಾಯಿನಿಕೇತನ ಆಶ್ರಮ ಮೂಲಕ ಮಾ.12ರಂದು ಬೆಳಗ್ಗೆ ತಲಪಾಡಿಯಲ್ಲಿ ರಥವನ್ನು ಸ್ವಾಗತಿಸಲಾಗುವುದು ಎಂದು ಸಂಘಟಕರಾದ ಪದಮನಾಭ ಪೈ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನ ನೀಡಿದರು.

