ಮಂಗಳೂರು: ದೀಪಾವಳಿ ಹಬ್ಬವನ್ನ ಇಡೀ ಜಗತ್ತು ಆಚರಣೆ ಮಾಡುತ್ತಿದ್ದು ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗೋ ಪೂಜೆ ಮತ್ತು ಲಕ್ಷ್ಮಿ ಪೂಜೆ ಮಾಡಲಾಯಿತು.
ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಮಾರ್ ಕುಂಪಲ ಮಾತನಾಡಿ ಪ್ರಧಾನಮಂತ್ರಿ ಜಿಎಸ್ ಟಿ ಇಳಿಕೆ ಮಾಡಿದ ನಂತ್ರ ಜನರು ಸಂತೃಪ್ತಿ ಇಂದ ಹಬ್ಬ ಆಚರಣೆ ಮಾಡುತ್ತಿದ್ದಾರೆ ಎಂದರು.
ಗೋ ಪೂಜೆಯಲ್ಲಿ ಬಿಜೆಪಿ ಸಂಸದ ಬ್ರಿಜೇಶ್ ಚೌಟ ಮಹಿಳಾ ಮುಖಂಡರು ಮತ್ತು ಮಾಜಿ ಕಾರ್ಪೊರೇಟರ್ ಗಳು , ಕ್ಯಾಪ್ಟನ್ ಗಣೀಶ್ ಕಾರ್ನಿಕ್, ಮೋನಪ್ಪ ಭಂಡಾರಿ, ಮತ್ತಿತ್ತರು ಉಪಸ್ಥಿತರಿದ್ದರು.

