ಮಂಗಳೂರು : ಉಪ್ಪಿನಂಗಡಿಯಲ್ಲಿ ಖೋಟಾನೋಟು ತಯಾರಿ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪದ್ಮುಂಜದ ಅಡೆಂಜದಲ್ಲಿ ತಡರಾತ್ರಿ ಕಾರ್ಯಾಚರಣೆ ನಡೆಸಿದ್ದು, ಖೋಟಾನೋಟು ತಯಾರಿಸುತ್ತಿದ್ದ ಆರೋಪದಲ್ಲಿ 7 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಬಾಡಿಗೆ ಕಟ್ಟಡ ಒದಗಿಸಿದ ಸ್ಥಳೀಯ ವ್ಯಕ್ತಿಯನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುದ್ರಿತ ಖೋಟಾನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ೫೦೦ ನೋಟ್ ಬಂಡಲ್, ಮಾನಿಟರ್, ಆರ್ಬಿಐ ಸೀಲ್ ಟ್ರೇಡ್, ಗಾಂಧೀಜಿ ಇರುವ ಸೀಲ್ , ಎ೪ ಶೀಟ್, ಮಾನಿಟರ್, ಖೋಟಾನೋಟು ಮುದ್ರಣಕ್ಕೆ ಬಳಸಿದ್ದ ಪ್ರಿಂಟಿಂಗ್ ಮೆಷಿನ್ ಜಪ್ತಿ ಮಾಡಲಾಗಿದೆ.

ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದರು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ. 103/26 ಪ್ರಕರಣ ದಾಖಲು ಮಾಡಲಾಗಿದೆ ಎಂದು ಮಂಗಳೂರು ಎಸ್ಪಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.