ಪುತ್ತೂರು: ಇಲ್ಲಿನ ಎಪಿಎಂಸಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ. ಭಾರೀ ಮಳೆ ಸುರಿಯುತ್ತಿದ್ದು, ತಾಲೂಕಿನ ಪ್ರಮುಖ ರಸ್ತೆಯಾಗಿರುವ ಎಪಿಎಂಸಿ ರಸ್ತೆ ನೀರಿನಿಂದ ತುಂಬಿ ಹೋಗಿದೆ. ಸದ್ಯವೇ, ಆದರ್ಶ ಆಸ್ಪತ್ರೆ ಬಳಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸನಿಹಕ್ಕೆ ತಲುಪಿದೆ.

ಭಾರಿ ಮಳೆ ಹಿನ್ನಲೆಯಲ್ಲಿ ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆ ಕಂಡಿದೆ. ಇನ್ನು ಪುತ್ತೂರಿನ ಎಪಿಎಂಸಿ ರಸ್ತೆ ಸಂಪರ್ಕ ಕಡಿತಕ್ಕೆ ಕ್ಷಣಗಣನೆ ಶುರುವಾಗಿದೆ. ತೀರ ಮಳೆಯಿಂದಾಗಿ ಪುತ್ತೂರಿನ ರಸ್ತೆಗಳು ಮುಳುಗಡೆಗೊಳ್ಳುತ್ತಿವೆ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ.