ದಕ್ಷಿಣ ಕನ್ನಡ : ಬೆಳ್ತಂಗಡಿಯ ಧರ್ಮಸ್ಥಳದಲ್ಲಿ ಸೋಮವಾರ ನಕಲಿ ದೇವಮಾನವ ವಿರುದ್ಧ ಪಾದಯಾತ್ರೆ ನಡೆಸಿದ ಶರಣಬಸಪ್ಪ ಕಬ್ಜ ಹಾಗೂ ಅವರ ತಂಡ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿ ಕೊನೆಗೆ ಧರ್ಮಸ್ಥಳದ ಪೊಲೀಸ್ ಠಾಣೆ ಭೇಟಿಯಾಗಿ ವಾಪಸ್ಸಾದ ಘಟನೆ ನಡೆದಿದೆ.
ಸೌಜನ್ಯ ಪ್ರಕರಣದ ನೆಪದಲ್ಲಿ ಶರಣಬಸಪ್ಪ ಕಬ್ಜ ಮತ್ತು ಹತ್ತು ಮಂದಿ ಘೋಷಣೆ ಪಟಕಗಳನ್ನು ಹಿಡಿದು ಧರ್ಮಸ್ಥಳದ ಮಹಾದ್ವಾರದವರೆಗೆ ಪಾದಯಾತ್ರೆ ನಡೆಸಿ ಬಂದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಾಧಿಕಾರಿಗಳ ವಿರುದ್ಧ ತೀವ್ರ ಹೇಳಿಕೆ ನೀಡಿದ್ದ ಈ ಗುಂಪು ಸ್ಥಳೀಯರ ವಿರೋಧಕ್ಕೆ ತುತ್ತಾಯಿತು.
ಸ್ಥಳದಲ್ಲಿ ಮಾತಿನ ಚಕಮಕಿ, ಗಲಾಟೆ ನಡೆದಿದ್ದು, ಪೊಲೀಸರ ಮಧ್ಯಪ್ರವೇಶದೊಂದಿಗೆ ಪಾದಯಾತ್ರಿಕರನ್ನು ಠಾಣೆಗೆ ಕರೆದುಕೊಂಡು ಹೋಗಲಾಯಿತು. ನಂತರ ತಂಡದವರು ದರ್ಶನವಿಲ್ಲದೆ ಧರ್ಮಸ್ಥಳ ತೊರೆದರು.
ಸ್ಥಳೀಯರು ಈ ಗುಂಪನ್ನು ತಿರುಬೋಕಿಗಳೆಂದು ಗುರುತಿಸಿದ್ದು, ಧರ್ಮಸ್ಥಳದ ಗೌರವವನ್ನು ಕೆಡಿಸಲು ನಡೆಸಿದ ಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಾದಯಾತ್ರಿಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

