ಮಂಗಳೂರು : ಮಂಗಳೂರಿನ ಕೆಪಿಟಿ ಬಳಿಯ ಕರ್ನಾಟಕ ಪಾಲಿಟೆಕ್ನಿಕ್ ನಲ್ಲಿ ನಡೆಯುವ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಡಿಜೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಪೊಲೀಸ್ ಅಧಿಕಾರಿಯೊಂದಿಗೆ ಮಿಥುನ್ ರೈ ಮಾತನಾಡಿದ್ದಾರೆ.

ಅಧಿಕಾರಿಯು ಕಮಿಷನರ್ ಹೆಸರು ಹೇಳುವ ಸಂದರ್ಭದಲ್ಲಿ ಯಾವ ಕಮಿಷನರ್ ರಿ ಎಂದು ಹೇಳುತ್ತಿರುವ ಕಾಂಗ್ರೆಸ್ ಮುಖಂಡ. ವಿದ್ಯಾರ್ಥಿಯಾಗಿರುವಾಗ ಕಮಿಷನರ್ ಏನು ಡಿಜೆಗೆ ಡ್ಯಾನ್ಸ್ ಮಾಡಿಲ್ವಾ, ನೀವು ವಿದ್ಯಾರ್ಥಿಯಾಗಿದ್ದಾಗ ಡ್ಯಾನ್ ಮಾಡಿಲ್ವಾ, ಕಾಲೇಜು ಒಳಗೆ ನಡೆಯುವ ಡಿಜೆ ಕಮಿಷನರ್ ಗೆ ಹೇಗೆ ಗೊತ್ತಾಗುತ್ತೇರಿ, ಮಕ್ಕಳಿರುವಾಗ ಕುಣಿಯದೆ ಇನ್ಯಾವಾಗ ಮುದುಕ ಆದ್ಮೇಲೆ ಕುಣಿಯೋದಾ.

ನಾವು ಸಾರ್ವಜನಿಕವಾಗಿ ಹುಲಿವೇಷ ಮಾಡುತ್ತೇನೆ ಎಂದು ಪೋನ್ ಮೂಲಕ ಪೊಲೀಸ್ ಅಧಿಕಾರಿಗೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ಒತ್ತಡ ಹೇರಿದ್ದಾರೆ. ಮೊಬೈಲ್ ನಲ್ಲಿ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.