ಮಂಗಳೂರು : ಸುಲ್ತಾನ್ ಬತ್ತೇರಿಯ ಎಡ್ಜ್ ವಾಟರ್‌ನಲ್ಲಿ ನಡೆದ ದಾಂಡಿಯಾ ಕಾರ್ಯಕ್ರಮ ವಿವಾದಕ್ಕೆ ಕಾರಣವಾಗಿದೆ. ಅಕ್ಟೋಬರ್ 18ರಂದು ನವರಾತ್ರಿ ಪ್ರಯುಕ್ತ ನಡೆದ ದಾಂಡಿಯಾ ಕಾರ್ಯಕ್ರಮದ ವಿರುದ್ಧ ದೂರು ದಾಖಲಾಗಿದೆ.

ಕಾರ್ಯಕ್ರಮದಲ್ಲಿ ಅಸಭ್ಯ ನೃತ್ಯ ಹಾಗೂ ಅಶ್ಲೀಲ ಗಾಯನಗಳ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ದುರ್ಗಾವಾಹಿನಿ ಆರೋಪಿಸಿದೆ. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ದುರ್ಗಾವಾಹಿನಿ ವತಿಯಿಂದ ದೂರು ಸಲ್ಲಿಸಲಾಗಿದೆ.

ನವರಾತ್ರಿ ಹಬ್ಬದ ಹೆಸರಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವವರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕಾರ್ಯಕ್ರಮದ ಆಯೋಜಕರ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಆಗ್ರಹಿಸಲಾಗಿದೆ.