ದಕ್ಷಿಣ ಕನ್ನಡ : “ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಇಚಿಲಂಪಾಡಿ ನಿವಾಸಿ ಜಯಂತ್ ಎಂಬವರು ಮುಂದೆ ಬಂದಿದ್ದು, ತಮ್ಮ ದೂರು ನೀಡಲು ವಿಶೇಷ ತನಿಖಾ ದಳ (SIT) ಕಛೇರಿ, ಬೆಳ್ತಂಗಡಿಗೆ ಭೇಟಿ ನೀಡಿದ್ದಾರೆ.”

ದೂರು ಪರಿಶೀಲಿಸಿದ ಎಸ್‌.ಐ‌.ಟಿ ಅಧಿಕಾರಿಗಳು, ಸೂಕ್ತ ನ್ಯಾಯಯುತ ಕ್ರಮಕ್ಕಾಗಿ ಈ ದೂರನ್ನು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸಲ್ಲಿಸಲು ಸಲಹೆ ನೀಡಿದ್ದಾರೆ. ಇದರಂತೆ, ದೂರುದಾರರಾದ ಜಯಂತ್ ಅವರು ದಿನಾಂಕ 04 ಆಗಸ್ಟ್ 2025 ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ, ತಮ್ಮ ದೂರನ್ನು ನೀಡಿದ್ದು, ಪ್ರಕರಣವನ್ನು 200/DPS/2025 ಎಂಬ ಪ್ರಕರಣ ಸಂಖ್ಯೆಯಲ್ಲಿ ದಾಖಲಿಸಲಾಗಿದೆ.

ಧರ್ಮಸ್ಥಳ ಪೊಲೀಸರು ಈಗಾಗಲೇ ಈ ದೂರನ್ನು ಸ್ವೀಕರಿಸಿದ್ದು, ಪ್ರಕರಣ ಸಂಬಂಧ ಮುಂದಿನ ತನಿಖಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಮುಂದೆ ಇನ್ನಷ್ಟು ವಿವರಗಳು ನಿರೀಕ್ಷಿಸಲಾಗಿದೆ.