ಮಂಗಳೂರು : ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಒಂದು ವರ್ಷದಿಂದ ಮಹತ್ತರ ಪಾತ್ರ ವಹಿಸಿರುವ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾ‌ರ್ ರೆಡ್ಡಿ ಅವರನ್ನು ವರ್ಗಾವಣೆ ಮಾಡಬಾರದು ಎಂಬ ಅಭಿಯಾನ ಮತ್ತೆ ಆರಂಭಗೊಂಡಿದೆ.

ರಾಜ್ಯದಲ್ಲಿ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಹೊಸ ಸಚಿವ ಮಂಡಲ ರಚನೆಯಾಗಿರುವುದರಿಂದ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಜಿಲ್ಲಾ ಪೊಲೀಸ್‌ ಅಧೀಕ್ಷಕ ಅರುಣ್ ಕೆ. ವರ್ಗಾವಣೆ ಬಗ್ಗೆ ವದಂತಿ ಕೇಳಿ ಬಂದಿದೆ.

ಹೀಗಾಗಿ ಕಮಿಷನ‌ರ್ ವರ್ಗಾವಣೆ ಬೇಡ, ಅವರು ಮಂಗಳೂರಿನ ಶಾಂತಿ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಜತೆ ನಾವಿದ್ದೇವೆ, ಮಂಗಳೂರಿನ ಶಾಂತಿ ಮತ್ತು ಅಭಿವೃದ್ಧಿಗಾಗಿ ನಾವು ಅವರ ಜತೆ ಒಟ್ಟಾಗಿ ನಿಂತಿದ್ದೇವೆ ಎಂದು ಅಭಿಯಾನ ನಡೆಯುತ್ತಿದೆ.ಯಾವುದೇ ಕಾರಣಕ್ಕೂ ಈ ಇಬ್ಬರೂ ಅಧಿಕಾರಿಗಳನ್ನು ಜಿಲ್ಲೆಯಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭಿಯಾನ ತೀವ್ರಗೊಳಿಸಲಾಗುತ್ತಿದೆ.