ಮಂಗಳೂರು: ಯೆನೆಪೊಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಯೆನೆಪೊಯ ನರ್ಸಿಂಗ್ ಕಾಲೇಜಿನಲ್ಲಿ ಬಿ.ಎಸ್ಸಿ., ಪಿ.ಬಿ.ಬಿ.ಎಸ್ಸಿ. ಹಾಗೂಎಂ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪಯಣಕ್ಕೆ ಸ್ವಾಗತಿಸುವ ‘ದೀಕ್ಷಾರಂಭ’ ಕಾರ್ಯಕ್ರಮವನ್ನುಆಗಸ್ಟ್ 19ರಂದು ಆಯೋಜಿಸಲಾಯಿತು.

ಯೆನೆಪೊಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಪತಿ ಡಾ. ಗಂಗಾಧರ ಸೋಮಯಾಜಿ ಕೆ.ಎಸ್. ಮುಖ್ಯ ಅತಿಥಿಯಾಗಿ ಹಾಗೂ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಅಸ್ವಿನಿ ದತ್ ಆರ್ ರವ ಅತಿಥಿಯಾಗಿ ಉಪಸ್ಥಿತರಿದ್ದರು. ಯೆನೆಪೊಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀನಾಕೆ.ಸಿ. ಹಾಗೂ ಉಪಪ್ರಾಂಶುಪಾಲರಾದ ಡಾ. ಪ್ರಿಯಾರೇಷ್ಮಾಉಪಸ್ಥಿತರಿದ್ದರು.

ಮುಖ್ಯಅತಿಥಿ ಡಾ. ಗಂಗಾಧರ ಸೋಮಯಾಜಿ ಕೆ.ಎಸ್. ಅವರು ನರ್ಸಿಂಗ್ ವೃತ್ತಿಯ ಮಹತ್ವ, ಅದರ ವಿಕಾಸ ಹಾಗೂ ಭವಿಷ್ಯದ ಅವಕಾಶಗಳ ಕುರಿತು ಮಾತನಾಡಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಶೈಕ್ಷಣಿಕ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜ್ಞಾನ, ಕೌಶಲ್ಯಹಾಗೂ ವೃತ್ತಿಪರ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಯೆನೆಪೊಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಯೆನೆಪೊಯ ಅಬ್ದುಲ್ಲಾಕುನ್ಹಿ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ, ವಿಶ್ವವಿದ್ಯಾಲಯಕ್ಕೆಆತ್ಮೀಯವಾಗಿ ಸ್ವಾಗತಿಸಿದರು.

ಡಾ. ಅಸ್ವಿನಿ ದತ್ ಆರ್ ಅವರು ನರ್ಸಿಂಗ್ ಕ್ಷೇತ್ರದಲ್ಲಿ ಸಹಾನುಭೂತಿ, ಕರುಣೆ ಮತ್ತು ಮಾನವೀಯ ಮೌಲ್ಯಗಳ ಮಹತ್ವವನ್ನು ಒತ್ತಿ ಹೇಳಿ, ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ವೃತ್ತಿಗೆ ಲಭ್ಯವಿರುವ ವಿಸ್ತೃತ ಅವಕಾಶಗಳ ಕುರಿತು ತಿಳಿಸಿದರು. ಡಾ. ಲೀನಾಕೆ.ಸಿ. ಅವರು ಅಧ್ಯಕ್ಷೀಯ ಭಾಷಣ ನೀಡಿ, ವಿದ್ಯಾರ್ಥಿಗಳುತಮ್ಮ ಶೈಕ್ಷಣಿಕ ಹಾಗೂ ವೃತ್ತಿಪರಜೀವನದಲ್ಲಿ ಶಿಸ್ತು, ವೃತ್ತಿಪರಮೌಲ್ಯಗಳು ಮತ್ತು ಮಾನವೀಯತೆಯನ್ನುಅಳವಡಿಸಿಕೊಂಡು ಸೇವಾಮನೋಭಾವದಿಂದ ಮುನ್ನಡೆಯುವಂತೆ ಪ್ರೇರೇಪಿಸಿದರು.

ಬಿ.ಎಸ್ಸಿ. ನರ್ಸಿಂಗ್ಶ್ರೀಇಬ್ರಾಹಿಂ ಪ್ರಾರ್ಥನೆ ಸಲ್ಲಿಸಿದರು, ಡಾ. ಪ್ರಿಯಾರೇಷ್ಮಾಸ್ವಾಗತ ಭಾಷಣ ಮಾಡಿದರು ಹಾಗೂ ಡಾ. ಬಿನ್ಶಾಪಪ್ಪಚ್ಚನ್ಸಿ.ವಂದನಾರ್ಪಣೆ ಸಲ್ಲಿಸಿದರು. ಡಾ. ಶರಿನ್ ಕಾರ್ಯಕ್ರಮವನ್ನು ನಿರೂಪಿಸಿದರು