ಕಡಬ: ಕಾರು ಮತ್ತು ಮಿನಿ ಟೆಂಪೋ ಢಿಕ್ಕಿ ಹೊಡೆದ ಘಟನೆ ಕುದ್ಮಾರು – ಅಲಂಕಾರು ರಸ್ತೆಯ ಶಾಂತಿಮೊಗರಿನಲ್ಲಿ ಮೇ 28ರಂದು ನಡೆದಿದೆ.

ಕುದ್ಮಾರು ಕಡೆಗೆ ಬರುತ್ತಿದ್ದ ಕಾರು ಮತ್ತು ಅಲಂಕಾರು ಕಡೆಗೆ ಹೋಗುತ್ತಿದ್ದ ಬೇಕರಿ ಉತ್ಪನ್ನಗಳ ಲೈನ್ ಸೇಲ್‌ನ ಮಿನಿ ಟೆಂಪೋ ನಡುವೆ ಅಪಘಾತ ಉಂಟಾಗಿದೆ. ಅಪಘಾತದ ರಭಸಕ್ಕೆ ಟೆಂಪೋ ಪಲ್ಟಿಯಾಗಿದೆ. ಅದರಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.