ಸುಳ್ಯ: ಮನೆಯ ಮುಂಭಾಗದಲ್ಲಿದ್ದ ತೆಂಗಿನ ಮರ ತುಂಡಾಗಿ ಮನೆಯ ಅಂಗಳಕ್ಕೆ ಬಿದ್ದ ಘಟನೆ ಸುಳ್ಯದ ಪೈಚಾರ್‌ನಲ್ಲಿ ನಡೆದಿದೆ.

ಮನೆಯ ಅಂಗಳದಲ್ಲಿ ನಿಂತಿದ್ದ ವ್ಯಕ್ತಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಮನೆಯ ಸ್ಲ್ಯಾಬ್ ಮೇಲಿನಿಂದ ಬೀಳುತ್ತಿದ್ದ ಮಳೆ ನೀರನ್ನು ಬಕೆಟ್‌ನಲ್ಲಿ ತುಂಬುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ತುಂಡಾಗಿ ತೆಂಗಿನ ಮರ ಬೀಳುವುದನ್ನು ಕಂಡ ಅವರು ಅಲ್ಲಿಂದ ಓಡಿ ಅಪಾಯದಿಂದ ಪಾರಾದರು. ಇದೇ ಸ್ಥಳದಲ್ಲಿ ಘಟನೆ ಸಂಭವಿಸುವ ಮೊದಲು ಅವರ ತಾಯಿ ಆ ಜಾಗದಲ್ಲಿದ್ದರೆಂದು ತಿಳಿದು ಬಂದಿದೆ. ಮರ ಬೀಳುವ ದೃಶ್ಯ ಸಿಸಿ ಟಿವಿ ಯಲ್ಲಿ ಸೆರೆಯಾಗಿದೆ.

View this post on Instagram

A post shared by News Karnataka (@newskarnataka)