ಮಂಗಳೂರು: ದ.ಕ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಿದರು. ಮೇ. ೧೬ ರಂದು ಸಿಎಂ ಸಿದ್ಧರಾಮಯ್ಯ ಮಂಗಳೂರು ಪ್ರವಾಸ ಹಿನ್ನಲೆ ಕಾರ್ಯಕ್ರಮಗಳ ಬಗ್ಗೆ ಪೂರ್ವಭಾವಿ ಸಭೆ ಮಾಡಲಾಗಿದೆ.
ಸಿಎಂ ನೂತನ ಜಿಲ್ಲಾಧಿಕಾರಿ ಕಛೇರಿ ಉದ್ಘಾಟನೆ ಮಾಡಲಿದ್ದಾರೆ. ಸಿಎಂ ಸಿದ್ಧರಾಮಯ್ಯ ಹಿಂದಿನ ಅವಧಿಯಲ್ಲೇ ಶಂಕುಸ್ಥಾಪನೆ ಮಾಡಿದ್ದರು. ಇದೀಗ ಮತ್ತೊಮ್ಮೆ ಸರ್ಕಾರ ಬಂದ್ಮೇಲೆ ಕಟ್ಟಡ ಕಾಮಗಾರಿ ಪೂರ್ಣ ಮಾಡಲಾಗಿದೆ. ಒಟ್ಟು ೭೫ ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ವಾಗಿದೆ.
ಮೇ.೧೬ ರಂದು ನೂತನ ಜಿಲ್ಲಾಧಿಕಾರಿ ಕಟ್ಟಡ ಲೋಕಾರ್ಪಣೆ ಯಾಗಲಿದೆ. ೨೩ ಇಲಾಖೆಗಳು ನೂತನ ಕಟ್ಟಡಕ್ಕೆ ಸ್ಥಳಾಂತರ ಆಗಲಿದೆ. ಆಡಳಿತ ವ್ಯವಸ್ಥೆ ಗೆ ಈ ನೂತನ ಜಿಲ್ಲಾಧಿಕಾರಿ ಕಟ್ಟಡ ಮೈಲುಗಲ್ಲು ಆಗಲಿದೆ. ಡಿಸಿ ಕಛೇರಿಯ ಉದ್ಘಾಟನೆ ಸಂಧರ್ಭ ೭,೦೦೦ ಜನರಿಗೆ ಭೂಮಿ ಹಕ್ಕುಪತ್ರ ನೀಡಲಿದ್ದೇವೆ.
೨೦೦ ಮಂದಿ ವಿಕಲಚೇತನರಿಗೆ ಸೌಲಭ್ಯ ವಿತರಣೆ ಮಾಡಲಿದ್ದೇವೆ. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಿದ್ದೇವೆ. ಸ್ಮಾರ್ಟ್ ಸಿಟಿ ಯ ಒಳಾಂಗಣ ಕ್ರೀಡಾಂಗಣವನ್ನು ಸಿಎಂ ಉದ್ಘಾಟನಾ ಮಾಡಲಿದ್ದಾರೆ ಎಂದು ಮಂಗಳೂರಿನಲ್ಲಿ ದ.ಕ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದರು.

