ಮಂಗಳೂರು: ಆರ್ ಸಿ ಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮೀಷನರ್ ಅಮಾನತುಗೆ ಮಂಗಳೂರಿನಲ್ಲಿ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಘಟನೆ ಆದ ಬಳಿಕವೂ ದೋಸೆ ತಿಂದ್ರೆ ಅವರಿಗೆ ಮನುಷ್ಯತ್ವ ಇಲ್ಲ. ಮುಖ್ಯಮಂತ್ರಿ ಆ ಕೆಲಸ ಮಾಡಿದ್ರೆ ಭಗವಂತ ಅವರನ್ನು ಕ್ಷಮಿಸಲ್ಲ ಎಂದರು. ಮಕ್ಕಳನ್ನು ಕಳೆದುಕೊಂಡ ಹೆತ್ತವರು ಸಮಾಜದ ಶಾಪ ತಟ್ಟುತ್ತದೆ. ಈ ಮಾಹಿತಿ ಸುಳ್ಳು ಆಗಲಿ ಎಂದು ಆಶಿಸುತ್ತೇನೆ.
ಆದರೆ ಈ ಮಾಹಿತಿ ಸತ್ಯ ಆಗಿದ್ರೆ ಒಂದು ಕ್ಷಣದಲ್ಲೂ ಅವರು ಅಧಿಕಾರದಲ್ಲಿ ಇರಲೇಬಾರದು. ವಿಧಾನಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಿದ್ದು ಬೆಂಗಳೂರು ಕಮೀಷನರ್, ಸರ್ಕಾರ ರಾಜಕೀಯ ಲಾಭ ತೆಗೆದುಕೊಳ್ಳಬೇಕು ಅನ್ನೋದು ಕಮೀಷನರ್ ಆಸೆಯಾಗಿತ್ತು. ಕ್ರಿಕೆಟ್ ಆಟಗಾರರ ಜೊತೆ ಕಾಂಗ್ರೆಸ್ ಪಕ್ಷದ ಮುಖಂಡರ ಮಕ್ಕಳು ಮೊಮ್ಮಕ್ಕಳು ಸೆಲ್ಫಿ ತೆಗೆದುಕೊಳ್ಳಲಿ ಅಂತಾ ಕಮೀಷನರ್ ವ್ಯವಸ್ಥೆ ಮಾಡಿದ್ರು ಎಂದರು.

