ಮಂಗಳೂರು: ಸುರ್ಜೇವಾಲಾ ರಾಜ್ಯ ಬಂದಿರೋದು ಕಪ್ಪ ಪಡೆಯಲು ಎಂಬ ಸಿಟಿ ರವಿ ಹೇಳಿಕೆ ವಿಚಾರವಾಗಿ ಮಂಗಳೂರಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಪೂಜಾರಿ ವಾಗ್ದಾಳಿ ನಡೆಸಿದರು.
ಸಿಟಿ ರವಿ ಅಸಂಬದ್ಧ ಹೇಳಿಕೆ ನೀಡುವುದು ಸರಿಯಲ್ಲ. ಸುರ್ಜೇವಾಲಾ ಅವರು ಶಾಸಕರು ಸಮಸ್ಯೆಯನ್ನ ಆಲಿಸಲು ಬಂದಿದ್ದಾರೆ. ಸಿಟಿ ರವಿ ಅವರು ಬೇರೆ ಬೇರೆ ರಾಜ್ಯದ ಉಸ್ತುವಾರಿ ಆಗಿ ಕೆಲಸ ಮಾಡಿದ್ದಾರೆ. ಆ ರಾಜ್ಯಕ್ಕೆ ಭೇಟಿ ನೀಡಿದಾಗ ಕಪ್ಪ ಪಡೆಯಲು ಹೋಗಿದ್ದೀರಾ? ಎಂದರು.

