ಮಂಗಳೂರು: ನಾಡಿನ ಸಮಸ್ತ ಕ್ರೈಸ್ತ ಸಮುದಾಯದ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರಿಗೆ ಕ್ರಿಸ್ ಮಸ್ ಹಬ್ಬದ ಶುಭಾಶಯವನ್ನು ಕ್ರೈಸ್ತ ನಾಯಕರು ಮತ್ತು ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿಸೋಜಾ ಕೋರಿದರು.
ಕರಾವಳಿ ಕರ್ನಾಟಕದಲ್ಲಿ ಕ್ರಿಸ್ ಮಸ್ ಹಬ್ಬಕ್ಕೆ ಸಿದ್ಧಪಡಿಸಲಾದ ಕೇಕ್, ನ್ಯೂರಿ, ಕುಕ್ಕೀಸ್, ಕಿಡಿಯೋ, ಅಕ್ಕಿಲಡ್ಡು, ಖಾದ್ಯ ತಿಂಡಿ-ತಿನಿಸುಗಳ ಜೊತೆ ಕ್ರಿಸ್ ಮಸ್ ಟೋಪಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ನೀಡಿ ಕ್ರಿಸ್ಮಸ್ಹಬ್ಬದ ಶುಭಾಶಯ ಕೋರಲಾಯಿತು.
ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ನಾಡಿನ ಎಲ್ಲಾ ಜನತೆಗೆ ಕ್ರಿಸ್ ಮಸ್ ಹಬ್ಬವು ಶಾಂತಿ -ಸೌಹಾರ್ಧತೆಯಿಂದ ಮೂಡಿ ಬರಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ವಿಜಯ ಬೈಕಂಪಾಡಿ, ಕ್ರೈಸ್ತ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾದ ಎಸ್ ಚಿನ್ನಪ್ಪ ಮತ್ತು ಸಿರಿಲ್ ಡಿ ಸೋಜಾ ರವರು ಉಪಸ್ಥಿತರಿದ್ದರು.

