ಮಂಗಳೂರು: ಮಂಗಳೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು,
ಇದೊಂದು ದುರದೃಷ್ಟಕರ ಸಂಗತಿ. ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ ಎಂಬುದು ನಾವೆಲ್ಲಾ ತಲೆ ತಗ್ಗಿಸುವ ವಿಚಾರ ಎಂದಿದ್ದಾರೆ.
ಜವಬ್ದಾರಿ ಸ್ಥಾನದ ಮಹಿಳಾ ಮಂತ್ರಿಯಾಗಿ ಇದೊಂದು ತಲೆ ತಗ್ಗಿಸುವ ವಿಚಾರನಮ್ಮ ಇಲಾಖೆಯಿಂದ ಸಾಕಷ್ಟು ಕ್ರಮಗಳು ಆಗಿದೆ. ಆದರೆ ನಮ್ಮ ಒಂದು ಇಲಾಖೆಯ ಮಾತ್ರ ಲೋಪದೋಷವೆಂದು ಹೇಳಲು ಸಾಧ್ಯವಿಲ್ಲ.ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯತ್ ಸಹಕಾರ ಬೇಕಾಗುತ್ತೆ.ಪ್ರೈಮರಿ ಶಾಲೆಯ ಎಸ್.ಡಿ.ಎಂ.ಸಿ ಸಹಕಾರ ಬೇಕಾಗುತ್ತೆ ಅಲ್ಲದೇ ಕಾನೂನು, ಆರೋಗ್ಯ, ಪೊಲೀಸ್ ಇಲಾಖೆ ಸಹಕಾರ ಬೇಕು. ಎಲ್ಲರೂ ಒಗ್ಗಟಾಗಿ ಕೆಲಸ ಮಾಡಿದಾಗ ಈ ಬಾಲ್ಯ ವಿವಾಹ ತಡೆಗಟ್ಟಲು ಸಾದ್ಯವಿದೆ ಎಂದರು.
ಬಳ್ಳಾರಿ ಪ್ರಥಮ ಸ್ಥಾನವಾಗಿದೆ, ಬೆಳಗಾವಿ ಎರಡನೇ ಜಿಲ್ಲೆಯಾಗಿದೆ
ಬೆಳಗಾವಿ ಎರಡನೇ ಜಿಲ್ಲೆಯಾಗಿದೆ ಎಂದು ಹೇಳಲು ನನಗೆ ಬಹಳಷ್ಟು ನಾಚಿಕೆ ಆಗುತ್ತೆ ಅದು ಮೂಡನಂಬಿಕೆಯಿಂದ ಮಾಡ್ತಾರೋ ಏನು ಕಾರಣ ಎಂಬುದೇ ಗೊತ್ತಾಗ್ತಿಲ್ಲ
ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದ ಕಮಿಟಿ ಇದೆ,ಅದರಲ್ಲಿ ವಕೀಲರು, ಸಂಘ ಸಂಸ್ಥೆಗಳ ಮುಖ್ಯಸ್ಥರು ಇರ್ತಾರೆ. ಕಟ್ಟು ನಿಟ್ಟಿನ ನಿರ್ದಾಕ್ಷಿಣ್ಯ ಕ್ರಮ ಆಗುತ್ತೆ ನಮಗೆ ವಿಚಾರ ಗೊತ್ತಾದ ತಕ್ಷಣ ಎಫ್.ಐ.ಆರ್ ಮಾಡ್ತೇವೆ. ಆದ್ರೂ ಸಹ ಬಾಲ್ಯ ವಿಹಾಹ ಆಗ್ತಿದೆ ಬಾಲ್ಯದಲ್ಲೇ ಗರ್ಭಿಣಿಯರು ಆಗ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಇನ್ನಷ್ಟು ಗಟ್ಟಿಯಾಗಿ ಬೇರು ಮಟ್ಟದಿಂದ ಹೋಗಲಾಡಿಸುವ ಪ್ರಯತ್ನ ಮಾಡ್ತೇವೆ . ಈ ಬಗ್ಗೆ ಅಧಿಕಾರಿಗಳಿಗೂ ಈಗಾಗಲೇ ನಿರ್ದೇಶನ ನೀಡಿದ್ದೇನೆ
ಮಂಗಳೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಲ್ಕರ್ ಭರವಸೆ ನೀಡಿದ್ದಾರೆ.

