ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಲ್ಲಿ ಮಳೆಯ ಕೊರತೆ ಉಂಟಾಗಿದ್ದು ಅದನ್ನು ನೀಗಿಸಲು ಮಂಗಳೂರಿನ ಕದ್ರಿ ದೇವಾಲಯದಲ್ಲಿ ಇಂದು ಬೆಳಿಗ್ಗೆ ಪರ್ಜನ್ಯ ಜಪ ನಡೆಸಲಾಯಿತು.

ಸಂಭಾವ್ಯ ಬರ ಪರಿಸ್ಥಿತಿಯನ್ನು ನಿವಾರಿಸುವಂತೆ ವರುಣ ದೇವನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಕರ್ನಾಟಕ ಕರಾವಳಿಯಲ್ಲಿ ಜೂನ್ ಜುಲೈ ಭಾರೀ ಮಳೆ ಬೀಳುವ ಕಾಲ. ನದಿಗಳು ಉಕ್ಕಿ ಹರಿಯುವ, ನೆರೆ‌ಬಂದು ಕೆಳ ಮಟ್ಟದ ಪ್ರದೇಶಗಳು ಜಲಾವ್ರತವಾಗುವ ಕಾಲ.

ಆದರೆ ಈ ಬಾರಿ ಮಳೆಯೇ ನಾಪತ್ತೆಯಾಗಿದೆ.ವಾತಾವರಣದಲ್ಲಿ ಬೇಸಗೆಯ ಉಷ್ಣಾಂಶವಿದೆ. ತೆರೆದ ಬಾವಿಗಳಲ್ಲಿ ನೀರಿನ ಸೆಲೆ ಇಲ್ಲದಂತಾಗಿದೆ. ತೋಡುಗಳಲ್ಲಿ ಸಹಜವಾಗಿ ಹರಿಯಬೇಕಿದ್ದ ನೀರು ನಾಪತ್ತೆಯಾಗಿದೆ. ಒಟ್ಟಾರೆ ಬರದ ವಾತಾವರಣ ಮೂಡಿದೆ.

ಮಳೆಗಾಲವನ್ನು ಕರುಣಿಸುವಂತೆ ಮತ್ತು ನೀರಿನ ಕೊರತೆ ನೀಗಿಸುವಂತೆ ಹಾಗು ಕ್ಷೋಭೆಯ ವಾತಾವರಣ ನಿವಾರಿಸುವಂತೆ ಕದ್ರಿ ದೇವಾಲಯದ ಗೋಮುಖ ತೀರ್ಥದಲ್ಲಿ ಸಲ್ಲಿಸಲಾಯಿತು.

ಈ ಬಗ್ಗೆ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಮಾಹಿತಿ ನೀಡಿ ನಮ್ಮ ಕೃಷಿ ಸಂಸ್ಕೃತಿ, ನೀರಿನ ಸಂಸ್ಕೃತಿಗಳು ಅಪಾಯಕ್ಕೆ ಸಿಲುಕಿರುವ ಸಂದರ್ಭದಲ್ಲಿ ದೇವರನ್ನು ಪ್ರಾರ್ಥಿಸಿ ವೇದ ಪಾರಾಯಣ ಹಾಗು ಪರ್ಜನ್ಯ ಜಪ ಮಾಡಲಾಯಿತು ಎಂದರು.