ಮಂಗಳೂರು : ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪತ್ರಿಕಾಗೋಷ್ಠಿಯಲ್ಲಿ ಜನಗಣತಿ, ಸ್ಟಿಕ್ಕರ್ ಅಂಟಿಸುವ ಮೂಲಕ ಸಮಸ್ಯೆ ಸೃಷ್ಟಿಯಾಗಿದೆ. ಮೊದಲೇ ಸಭೆ ನಡೆಸಿ ಪೂರ್ಣ ಮಾಹಿತಿ ಜನರಿಗೆ ತಿಳಿಸಿದ್ದರೆ ಜನರಿಗೆ ಸಂದೇಹ ಬರ್ತಾ ಇರ್ಲಿಲ್ಲ ಎಂದರು.

ಸ್ಪೀಕರ್ ಖಾದರ್ ನಡೆಯನ್ನು ಖಂಡಿಸಿದ ಅವರು ಸ್ಪೀಕರ್ ಆಗಿ ನಭೆ, ಕಾರ್ಯಾಗಾರ ನಡೆಸುವುದು ಸರಿಯಾ? ಉಸ್ತುವಾರಿ ಮಾಡುವ ಕೆಲಸ ಸ್ಪೀಕರ್ ಮಾಡ್ತಾ ಇದ್ದಾರೆ. ಇವರು ಸ್ಪೀಕರ ಅಥವಾ ಉಸ್ತುವಾರಿಯಾ? ಸ್ಟಿಕ್ಕರ್ ಅಂಟಿಸಿದ ಬಳಿಕ ಸಭೆ ಮಾಡಿದ್ದು ಯಾಕೆ? 165 ಕೋಟಿ ಹಣ ಖರ್ಚು ಮಾಡಿ ತಯಾರಿಸಿದ ಕಾಂತರಾಜ್ ವರದಿ ಮೇಲೆ ಕಾಂಗ್ರೆಸ್ ಅಪನಂಬಿಕೆ ಇದೆ. ಹಿಂದೂಗಳ ಹಬ್ಬದ ರಜೆಯ ಸಂದರ್ಭದಲ್ಲಿ ಸಮೀಕ್ಷೆ ಮಾಡುವ ಉದ್ದೇಶವೇನು? ಅವಸರ ಯಾಕೆ? ಸಾಕಷ್ಟು ಸಮಯವಕಾಶ ತೆಗದುಕೊಂಡು ಮಾಡಬೇಕಿತ್ತು ಎಂದರು.

47 ಹಿಂದೂ ಉಪಜಾತಿಗಳ ಮೇಲೆ ಕ್ರಿಶ್ಚಿಯನ್ ಸೇರಿಸಲಾಗಿದೆ. ಮೀಸಲಾತಿ ತೆಗೆದು ಕ್ರಿಶ್ಚಿಯನ್ ಕೊಡುವ ಹುನ್ನಾರ ಇದೆ. ಕ್ರಿಶ್ಚಿಯನ್ ಪದ ಬಳಕೆ ಮಾಡಿ ಮತಾಂತರಕ್ಕೆ ಕುಮ್ಮಕ್ಕು ನೀಡಿದ್ದಾಗಿ ಅಂತ ರಾಜ್ಯ ಸಂಘಟನೆ ಹೇಳಿದೆ. ಸಮಾಜದಲ್ಲಿ ಅಪನಂಬಿಕೆಗೆ ಮೂಡಿದ್ದು ಲೋಪದೋಷ ಸರಿಪಡಿಸಿ ಸಮೀಕ್ಷೆ ನಡೆಸುವಂತೆ ಜಿಲ್ಲಸಮಿತಿಯಿಂದ ಕೇಳುತ್ತಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪೂಜಾ ಪೈ, ರವಿಶಂಕರ ಮಿಜಾರು, ನಿತಿನ್ ಕುಮಾರ್, ಸಂಜೀವ ಪ್ರಭು, ಮೋಹನ್ ರಾಜ್ ಮತ್ತಿತರರಿದ್ದರು.