ಮಂಗಳೂರು: ವಿದೇಶದಲ್ಲಿ ಉದ್ಯೋಗ ದಲ್ಲಿದ್ದು, ಮಂಗಳೂರಿಗೆ ಮರಳಿರುವ ವ್ಯಕ್ತಿಯೋರ್ವರು ಫೇಸ್ಬುಕ್ನಲ್ಲಿ “ಫೆಡ ರೇಟೆಡ್ ಹಮ್ಸ್ì ಷೇರ್ ಟ್ರೇಡಿಂಗ್ ಕಂಪೆನಿ’ ಎಂಬ ಜಾಹೀರಾತು ನೋಡಿದ್ದರು. ಕುತೂಹಲದಿಂದ ಅದರಲ್ಲಿದ್ದ ಲಿಂಕ್ ಒತ್ತಿದ್ದರು. ಬಳಿಕ ಅವರನ್ನು “ಟ್ರೇಡಿಂಗ್ ಕಂಪೆನಿ’ಯವರು ವಾಟ್ಸಾಪ್ ಗ್ರೂಪೊಂದಕ್ಕೆ ಸೇರಿಸಲಾಯಿತು.
ಕೆಲವೇ ಸಮಯದಲ್ಲಿ ಮತ್ತೊಂದು ವಾಟ್ಸಾಪ್ ಗ್ರೂಪ್ಗೆ ಸೇರಿಸಲ್ಪಟ್ಟರು. ಅಲ್ಲಿ ಗ್ರೂಪ್ ಅಡ್ಮಿನ್ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡತೊಡಗಿದ. ಷೇರು ಮಾರುಕಟ್ಟೆಗೆ ಸಂಬಂಧಿಸಿ ಹಲವಾರು ಮಂದಿ ವ್ಯವಹಾರ ನಡೆಸುತ್ತಿರುವ ರೀತಿಯಲ್ಲಿ ಆ ಗ್ರೂಪ್ನಲ್ಲಿ ಸಂದೇಶಗಳನ್ನು ಹಾಕಲಾಗುತ್ತಿತ್ತು. ತಾನು ಕೂಡ ಹೆಚ್ಚು ಲಾಭ ಗಳಿಸಬಹುದು ಎಂಬ ನಂಬಿಕೆ ಆ ವ್ಯಕ್ತಿಯಲ್ಲಿ ಮೂಡಿತು. ವಂಚಕರು ತಿಳಿಸಿದಂತೆ ಎ.15ರಂದು ಹಣ ಹೂಡಿಕೆ ಮಾಡಿದರು.
ಅನಂತರ ಗ್ರೂಪ್ನವರ ಸೂಚನೆಯಂತೆ ಹಂತ ಹಂತವಾಗಿ ಜೂ.7ರ ವರೆಗೆ ಒಟ್ಟು 5 ಕೋ.ರೂ.ಗಳನ್ನು ಕಳೆದುಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಇದೇ ರೀತಿ ಸ್ಟಾಕ್ ಮಾರ್ಕೆಟ್ ಹೂಡಿಕೆ ಎಂಬ ವಂಚನಾ ಕಂಪೆನಿಯ ಬಲೆಗೆ ಬಿದ್ದವರೊಬ್ಬರು 1.50 ಕೋ.ರೂ. ಕಳೆದುಕೊಂಡಿದ್ದಾರೆ.

