ಪುತ್ತೂರು: ಪುತ್ತೂರಿನ ದರ್ಬೆಯಲ್ಲಿ ವರ್ತಕರ ಮೇಲೆ ಹಲ್ಲೆ ಪ್ರಕರಣದ ಘಟನೆಯನ್ನು ಖಂಡಿಸಿ ಇಂದು ಪುತ್ತೂರು ಬಂದ್ ಮಾಡಲಾಗಿದೆ.
ಹಿಂದೂ ಜಾಗರಣ ವೇದಿಕೆ ಕರೆ ನೀಡಿರುವ ಬಂದ್ ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದೆ. ಆಟೋ ಚಾಲಕರಿಂದಲೂ ಬಂದ್ ಗೆ ಬೆಂಬಲ ನೀಡಲಾಗಿದೆ. ಎಂದಿನಂತೆ ಸರ್ಕಾರಿ ಬಸ್ ಗಳು ಕಾರ್ಯಾಚರಿಸುತ್ತಿದೆ.

