ಮಂಗಳೂರು: ತುಳುನಾಡಿನ ಜಾನಪದೀಯ ಕ್ರೀಡೆ ಕಂಬಳದ ಋತು ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಈ ಬಾರಿ ಮೊದಲ ಕಂಬಳ ಬೆಂಗಳೂರಿನಲ್ಲಿ ನಡೆದರೆ, ಕೊನೆಯ ಕಂಬಳ ಮಲೆನಾಡು ಶಿವಮೊಗ್ಗದಲ್ಲಿ ನಡೆಯಲಿದೆ. ಅಕ್ಟೋಬರ್ 26ರಂದು ಬೆಂಗಳೂರಲ್ಲಿ ಮೊದಲ ಕಂಬಳ ನಡೆಯಲಿದೆ.
ಕಂಬಳದ ಪೂರ್ವತಯಾರಿ ಎಂಬಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಪ್ರತೀ ವಾರಾಂತ್ಯದಲ್ಲಿ ಕುದಿ ಕಂಬಳಗಳು ನಡೆಯುತ್ತಿವೆ. ಕೋಣಗಳ ವೇಗ, ಜೋಡಿಯ ಸಾಮರ್ಥ್ಯ ತಿಳಿಯಲು ಕುದಿ ಕಂಬಳವನ್ನು ಅಲ್ಲಲ್ಲಿ ನಡೆಸಲಾಗುತ್ತಿದೆ. ಇದರ ಜತೆ ಸ್ನೇಹಕೂಟ ಕಂಬಳಗಳೂ ಭರ್ಜರಿಯಾಗಿ ನಡೆಯುತ್ತಿವೆ.
2024ರ ವೇಳಾಪಟ್ಟಿ:
ಅಕ್ಟೋಬರ್ 26 – ಬೆಂಗಳೂರು
ನವೆಂಬರ್ 9 – ಪಿಲಿಕುಳ
ನವೆಂಬರ್ 16 – ಪಣಪಿಲ
ನವೆಂಬರ್ 23 – ಕೊಡಂಗೆ
ನವೆಂಬರ್ 30 – ಕಕ್ಕೆಪದವು
ಡಿಸೆಂಬರ್ 7 – ಹೊಕ್ಕಾಡಿಗೋಳಿ
ಡಿಸೆಂಬರ್ 14 – ಬಾರಾಡಿಬೀಡು
ಡಿಸೆಂಬರ್ 21 – ಮೂಲ್ಕಿ
ಡಿಸೆಂಬರ್ 28 – ಮಂಗಳೂರು
ಜನವರಿ 4 – ಮಿಯ್ಯಾರು
ಜನವರಿ 11 – ನರಿಂಗಾನ
ಜನವರಿ 18 – ಅಡ್ವೆ
ಜನವರಿ 25 – ಮೂಡುಬಿದಿರೆ
ಫೆಬ್ರವರಿ 1 – ಐಕಳ
ಫೆಬ್ರವರಿ 8 – ಜೆಪ್ಪು
ಫೆಬ್ರವರಿ 15 – ವಾಮಂಜೂರು
ಫೆಬ್ರವರಿ 22 – ಕಟಪಾಡಿ
ಮಾರ್ಚ್ 1 – ಪುತ್ತೂರು
ಮಾರ್ಚ್ 8 – ಬಂಗಾಡಿ
ಮಾರ್ಚ್ 15 – ಬಂಟ್ವಾಳ
ಮಾರ್ಚ್ 22 – ಉಪ್ಪಿನಂಗಡಿ
ಮಾರ್ಚ್ 29 – ವೇಣೂರು
ಏಪ್ರಿಲ್ 5 – ಬಳ್ಕುಂಜೆ
ಏಪ್ರಿಲ್ 12 – ಗುರುಪುರ
ಏಪ್ರಿಲ್ 19 – ಶಿವಮೊಗ್ಗ

